ಬಡ ವ್ಯಾಪಾರಿಯ ಮಾನವೀಯತೆ: ವಿದ್ಯಾರ್ಥಿ ಗಳಿಗೆ ಪರಿಕರ ವಿತರಣೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಮ್ಮ ವಿದ್ಯಾಭ್ಯಾಸ ದಿನಗಳಲ್ಲಿ ಜೀವನವೇ ಕಷ್ಟ. ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಲು ಆಗಲಿಲ್ಲ ಹಾಗಾಗಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೋಟಕು ಗೊಳಿಸ ಬಾರದು ಎಂಬ ಪರಿಕಲ್ಪನೆಯಲ್ಲಿ ಕೈಲಾದ ಸಹಾಯ ಮಾಡಬೇಕು ಎಂದು ತೀರ್ಮಾನಿಸಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಬೇಕಿದೆ ಎಂಬ ಹಂಬಲ ಹೊತ್ತಿದ್ದೇನೆ ಎಂದು ತಳ್ಳುವ ಗಾಡಿಯಲ್ಲಿ ಫ್ಯಾನ್ಸಿ ಐಟಂ ಮಾರುವ ಬಡ ವ್ಯಾಪಾರಿ ಆಸಿಫ್ ಮೊಹಮ್ಮದ್ ಹೇಳಿದರು.

ಈಚೆಗೆ ತರೀಕೆರೆ ರಸ್ತೆಯ ಸರ್ಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು, ಜಾಮಿಟ್ರಿ ಬಾಕ್ಸ್, ಪ್ಲೈವುಡ್ ಶೀಟ್ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯದ ವಿದ್ಯಾ ಭ್ಯಾಸದಲ್ಲಿ ಕೊರತೆ ಇರಬಾರದು. ಮಕ್ಕಳು ಓದಿ ವಿದ್ಯಾವಂತರಾಗಲಿ ಅನ್ನುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಪರಿಕರಗಳನ್ನು ನೀಡಿರುವುದಾಗಿ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಸೋಮಶೇಖರ್, ನಗರಸಭೆ ಸದಸ್ಯ ಸುದೀಪ್ ಸೇರಿದಂತೆ ಶಿಕ್ಷಕರು ಮತ್ತಿತರರು ಉಚಿತ ಪರಿಕರ ವಿತರಿಸಿದ ಆಸಿಫ್ ಮೊಹಮ್ಮದ್ ರವರಿಗೆ ಅಭಿನಂದಿಸಿದರು. 

✍️ ವರದಿ ಟಿ. ಶ್ರೀನಿವಾಸ್ 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 
9743225895 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು