ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕನ್ನಡ ನಾಡು ನುಡಿ ಜಲ ರಕ್ಷಣೆ ಸೇರಿದಂತೆ ನಾಡಿನ ಸಂಸ್ಕೃತಿಗೆ, ಕ್ರೀಡೆಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಉದ್ದಗಲಕ್ಕೂ ಸಂಘಟನೆ ಬಲಪಡಿಸು ತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಸಹ ಸದಸ್ಯತ್ವ ಅಭಿಯಾನ ಆರಂಭಿಸ ಲಾಗುತ್ತಿದೆ ಎಂದು ಜನಪರ ವೇದಿಕೆ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸುದೀಪ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೂತನ ಸದಸ್ಯರಿಗೆ ಬರಮಾಡಿ ಕೊಳ್ಳುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡಿ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ರವರ ಸಾರಥ್ಯ ದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.
ಜಿಲ್ಲಾ ಮುಖಂಡ ಫ್ರಾನ್ಸಿಸ್ ಮಾತನಾಡಿ, ಜಯ ಕರ್ನಾಟಕ ಜನಪರ ವೇದಿಕೆಯ ತತ್ವ ಸಿದ್ಧಾಂತ ಗಳನ್ನು ಮೆಚ್ಚಿ ಶಿವಮೊಗ್ಗದ ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಸಂಘಟನೆಗೆ ಸೇರ್ಪಡೆಯಾಗಿದ್ದಾರೆ. ನೂತನವಾಗಿ ಸೇರ್ಪಡೆಗೊಂಡವರನ್ನು ಜನಪರ ವೇದಿಕೆಯ ರಾಜ್ಯ ಸಮಿತಿ ಯಾವುದೇ ಜವಾಬ್ದಾರಿಯನ್ನು ನೀಡಿದರು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಂಘಟನೆಯ ಸದಸ್ಯತ್ವ ಅಭಿಯಾನವನ್ನು ಮುಂದುವರಿಸುವ ವಿಶ್ವಾಸವಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ, ರಾಜ್ಯಾಧ್ಯಕ್ಷ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸಂಸ್ಥಾಪಕ ಅಧ್ಯಕ್ಷ ಗುಣ ರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಸಂಘಟನೆ ನಾಡು ನುಡಿ ಜಲ ರಕ್ಷಣೆ ಅಷ್ಟೇ ಅಲ್ಲದೆ ನೊಂದವರ ಪರವಾಗಿ ಧ್ವನಿ ಎತ್ತುವ ವೇದಿಕೆ ಆಗಿದೆ. ಪಕ್ಷಾತೀತ, ಜಾತ್ಯಾತೀತವಾಗಿ ಸಂಘಟನೆಗೆ ಎಲ್ಲರೂ ಸೇರಿ ಒಗ್ಗೂಡಿ ನಡೆಯೋಣ ಎಂದರು.
ಸಂಘಟನೆಗೆ ನೂತನವಾಗಿ ಸೇರ್ಪಡೆ ಗೊಂಡ ಸುರೇಶ್ ಶೆಟ್ಟಿ ಮಾತನಾಡಿ ಸಂಸ್ಥಾಪಕ ಅಧ್ಯಕ್ಷರ ನೇತೃತ್ವದಲ್ಲಿ ಸಂಘಟನೆಗೆ ಸೇರ್ಪಡೆಗೊಂಡಿದ್ದು ಎಲ್ಲರ ಸಹಕಾರದಿಂದ ಜಿಲ್ಲೆಯ ಏಳು ತಾಲೂಕು ಗಳಲ್ಲಿಯೂ ಸಂಘಟಿಸಲು ಮುಂದಾಗೋಣ ಎಂದರು.
ಇದೆ ಸಂದರ್ಭದಲ್ಲಿ ತಾಲೂಕಿನ ಹಲವು ನೂತನ ಕಾರ್ಯಕರ್ತರನ್ನು ಸಂಘಟನೆಯ ಬರಮಾಡಿಕೊಳ್ಳ ಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಮಂಜು ಕೊಹ್ಲಿ, ಶಬರೀಶ್, ದಿನೇಶ್, ನೌಶು, ಶಿವಮೊಗ್ಗದ ಗೋಪಿ, ನಾಗರಾಜ್, ಪವನ್, ಆಟೋ ವಿಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.