ಭದ್ರಾವತಿ-ಸಿಂಗನಮನೆ ಗ್ರಾಮದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ SAIL-VISP ವತಿ ಯಿಂದ ಸಾಂಸ್ಥಿಕ ಸಾಮಾಜಿಕ ಕಳ ಕಳಿಯ (CSR) ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ ಮತ್ತು ವಿಐಎಸ್ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಬುಧವಾರ ತಾಲ್ಲೂಕಿನ ಸಿಂಗನಮನೆ ಗ್ರಾಮದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಆಯೋಜಿ ಸಲಾಗಿತ್ತು.

ಶಿಬಿರದಲ್ಲಿ ತಜ್ಞವೈದ್ಯರುಗಳಿಂದ ಹೃದಯ ಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. 

ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ. ದಂತ ತಪಾಸಣೆ, ಎಲೆಕ್ಟೋಕಾರ್ಡಿಯೋ ಗ್ರಾಮ್ (ಇಸಿಜಿ), 2ಡಿ ಎಕೋಕಾರ್ಡಿ ಯೋಗ್ರಫಿ (2ಡಿಎಕೋ) ಮತ್ತು ಸ್ತ್ರೀ ಸಂಬಂಧಿತ ರೋಗಗಳ ತಪಾಸಣೆ ಮಾಡಲಾಯಿತು.

ವಿಐಎಸ್‌ಎಲ್ ಮಾನವಸಂಪನ್ಮೂಲ ಮುಖ್ಯ ಮಹಾಪ್ರಬಂಧಕ ಬಿ. ವಿಶ್ವನಾಥ ಕಾರ್ಯಕ್ರಮ ಉದ್ಘಾಟಿಸಿದರು.

ಸಿಂಗನಮನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳ,ಸದಸ್ಯೆ ಕವಿತ, ಕಾರ್ಖಾನೆಯ ಅಧಿಕಾರಿಗಳಾದ ಡಾ: ಕೆ.ಎಸ್.ಸುಜೀತ್ ಕುಮಾರ್, ಡಾ: ಎಸ್.ಎನ್. ಸುರೇಶ್, ಎಮ್.ಎಲ್. ಯೋಗೀಶ್ ಕೆ.ಬಿ, ಡಾ:ಪ್ರಭುದೇವ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ: ಸುಪ್ರೀತ, ಡಾ: ಅನ್ನು ಮತ್ತು ಶ್ರೀ ಗಣೇಶ್. ಶಂಕರ ಕಣ್ಣಿನ ಆಸ್ಪತ್ರೆಯ ಹರ್ಷ ಆರ್.ಗೌಡ ಮತ್ತು ತಂಡದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ 216 ಗ್ರಾಮಸ್ಥರು ಸದುಪ ಯೋಗ ಪಡಿಸಿಕೊಂಡರು. ಶಿಬಿರಾರ್ಥಿ ಗಳಿಗೆ ವಿಐಎಸ್‌ಎಲ್‌ ವತಿಯಿಂದ ಉಚಿತ ಔಷಧಿ ವಿತರಿಸಲಾಯಿತು.

ಸೈಲ್-ವಿಐಎಸ್ಎಲ್ ನ 'ಹಸಿರೆಡೆಗೆ-ನಮ್ಮ ನಡೆ' ಉಪಕ್ರಮದಡಿಯಲ್ಲಿ ನುಗ್ಗೆ ಮತ್ತು ಪಪ್ಪಾಯಿಯ ತಳಿಯ ಬೀಜ ಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು