ಭದ್ರಾವತಿ-ಸಿಂಗನಮನೆ ಗ್ರಾ ಪಂ ನಲ್ಲಿ ಡಿ:10 ರ ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: SAIL-VISL ವತಿಯಿಂದ VISL ಆಸ್ಪತ್ರೆ, ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ,ತಾಲ್ಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಸಿಂಗನಮನೆ ಗ್ರಾಮಪಂಚಾಯಿತಿ ಇವರ ಸಹ ಯೋಗದಲ್ಲಿ ಡಿ:10 ರ ನಾಳೆ ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00ರ ವರೆಗೆ ಸಿಂಗನಮನೆ ಸಂಯುಕ್ತ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ,ಹೃದಯ ತಪಾಸಣೆ, ECG ಮತ್ತು 2D Echo ಪರೀಕ್ಷೆಗಳು,ಕಣ್ಣಿನ ತಪಾಸಣೆ, ಮೂಳೆ ತಪಾಸಣೆ, ಹಲ್ಲು/ ದಂತ ತಪಾಸಣೆ, ರಕ್ತದೊತ್ತಡ (ಬಿ.ಪಿ), ಸಕ್ಕರೆ (ಮಧುಮೇಹ) ತಪಾಸಣೆ ನಡೆಸಲಾಗುವುದು.

ಈ ಸಂದರ್ಭದಲ್ಲಿ ವಿಐಎಸ್ಎಲ್‌ ವತಿ ಯಿಂದ ಉಚಿತ ಔಷಧ ವಿತರಿಸಲಾಗು ವುದು. ಗ್ರಾಮಸ್ಥರು/ ಸಾರ್ವಜನಿಕರು ಈ ಶಿಬಿರದ ಸದುಪಯೋಗಪಡಿಸಿ ಕೊಳ್ಳಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು