ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ಜೆ.ಪಿ.ಎಸ್ ಕಾಲೋನಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ:09 ರ ನಾಳೆ ಮಂಗಳವಾರದಂದು ವಿದ್ಯುತ್ ಅಡಚಣೆಯಾಗಲಿದೆ.
ಜೆ.ಪಿ.ಎಸ್.ಕಾಲೋನಿ, ಕಾಗದನಗರ, ಉಜ್ಜನೀಪುರ, ದೊಡ್ಡಗೊಪ್ಪೇನ ಹಳ್ಳಿ, ಆನೆಕೊಪ್ಪ ಸುತ್ತ ಮುತ್ತಲ ಪ್ರದೇಶ ಗಳಲ್ಲಿ ಬೆಳಿಗ್ಗೆ 09:00 ಘಂಟೆಯಿಂದ ಮಧ್ಯಾಹ್ನ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆ ಯಲ್ಲಿ ಕೋರಿದ್ದಾರೆ.