ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಾಡುಕಂಡ ಧೀಮಂತ ನಾಯಕ, ಸಮಾಜವಾದಿ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ರವರ 25ನೇ ಪುಣ್ಯ ಸ್ಮರಣೆ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರ ಘಟ್ಟಮ್ಮ ದೇವಿ ದೇವಸ್ಥಾನ ಮುಂಭಾಗದಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಜೆ.ಎಚ್. ಪಟೇಲ್ ರ ಅಭಿಮಾನಿ ಶಶಿಕುಮಾರ್ ಎಸ್ ಗೌಡ, ಜೆ.ಎಚ್. ಪಟೇಲ್‌ರವರು ರಾಜ್ಯದಲ್ಲಿ ತಮ್ಮ ಅಧಿಕಾರದ ಅವಧಿ ಯಲ್ಲಿ ಹಲವಾರು ಜನಪರ ಯೋಜನೆ ಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತದೊಂದಿಗೆ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಲೋಕಸಭೆ ಸದಸ್ಯರಾಗಿದ್ದ ಸಂದರ್ಭ ದಲ್ಲಿ ಸಂಸತ್‌ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಆಸ್ಮಿತೆ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಜೆ.ಎಚ್.ಪಟೇಲ್‌ರವರು ಮುಖ್ಯಮಂತ್ರಿಗಳಾಗಿ ಆಡಳಿತದ ನಡೆಸಿದ ಅವಧಿಯಲ್ಲಿನ ಉತ್ತಮ ಕಾರ್ಯಗಳ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಮೂಲಕ ಇಂದಿನ ಪೀಳಿಗೆಗೆ ತಿಳಿಸಿಕೊಡ ಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಸುರೇಶ್ ಪೂಜಾರಿ, ವೆಂಕಟೇಶ್ ಸಂಕ್ಷಿಪುರ, ಟಿ.ಎಂ. ರುದ್ರೇಶ್, ಕಿರಣ್ ಮತ್ತು ಸಚಿನ್ ಇನ್ನಿತರರಿದ್ದರು.