ಭದ್ರಾವತಿ-ಬಳಿ ಬೊಲೆರೋ ಪಲ್ಟಿ: ಸ್ಥಳದಲ್ಲಿ ಮಹಿಳೆ ಸಾವು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಬಿಸಿಲು ಮನೆ ಗ್ರಾಮದ ಬಳಿ ಬೊಲೆರೋ ವಾಹನ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿ ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. 

ಶಿವಮೊಗ್ಗ ತಾಲೂಕಿನ ಗಾಜುನೂರಿನ  ಸಮೀಪ ದೇವರಾಜ್ ಎಂಬುವವರ ನರ್ಸರಿ ಯಲ್ಲಿ ಕೆಲಸ ಮುಗಿಸಿಕೊಂಡು ಸುಮಾರು 14 ಜನ ಬೋಲೇರೋದಲ್ಲಿ ಭದ್ರಾವತಿ ತಾಲ್ಲೂಕಿನ ಬಂಡಿಗುಡ್ಡಕ್ಕೆ ತೆರಳುವಾಗ ಬಿಸಿಲುಮನೆ ಗ್ರಾಮದ ಬಳಿ ಬೊಲೆರೋ ಪಲ್ಟಿಯಾಗಿ ಗಾಡಿ ಯಲ್ಲಿದ್ದ 14 ಜನವು ಸಹ ಗಾಯ ಗೊಂಡಿದ್ದು, ಲಕ್ಷ್ಮಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮೃತ ದೇಹ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರು ಸಹ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು