ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಯೇಸುವಿನ ಜನನದ ವೃತ್ತಾಂತವೇ ಜಗತ್ತಿಗೆ ಹಲವು ಸಂದೇಶ ಗಳನ್ನು ಸಾರುತ್ತದೆ. ನಿರ್ಗತಿಕರ, ದೀನ ದಲಿತರ ನೋವುಗಳಿಗೆ ಸ್ಪಂದಿಸಿ ನೆರವಾಗುವುದೇ ಕ್ರಿಸ್‌ಮಸ್ ಆಚರಣೆ ಯಾಗಿದೆ. ಆಡಂಬರದ ಬದುಕು ಶಾಶ್ವತವಲ್ಲ, ನಾವುಮಾಡುವ ಒಳ್ಳೆಯ ಕಾರ್ಯಗಳು ಮಾತ್ರ ಶಾಶ್ವತ ಎಂದು ಪಾಸ್ಟರ್ ರೇಮಂಡ್ ಹೇಳಿದರು.
ಅವರು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮ ದಲ್ಲಿ ಕ್ರಿಸ್‌ಮಸ್ ಸಂದೇಶ ನೀಡಿದರು.
ಜಗತ್ತಿಗೆ ಯೇಸು ಕ್ರಿಸ್ತನ ಸಂದೇಶ ಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕರುಣೆ, ಮಮತೆ, ವಾತ್ಸಲ್ಯದೊಂದಿಗೆ ನಿಸ್ವಾರ್ಥ ಸೇವೆಯಲ್ಲಿ ತೊಡಗಬೇಕು. ಆಗ ಮಾತ್ರ ನಮ್ಮಬದುಕು ಸಾರ್ಥಕವಾಗು ತ್ತದೆ. ಈ ನಿಟ್ಟಿನಲ್ಲಿ ದಯಾಸಾಗರ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ನಿರಂತರವಾಗಿ ಸೇವೆಯಲ್ಲಿ ಮುಂದುವರೆಯುವ ಕೃಪೆ ಯೇಸುಕ್ರಿಸ್ತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ನಗರಸಭೆ ಸದಸ್ಯ ಚನ್ನಪ್ಪ, ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ,ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮಾತನಾಡಿ, ದಯಾಸಾಗರ್ ಟ್ರಸ್ಟ್ ಹಲವಾರು ವರ್ಷಗಳಿಂದ ನಿರ್ಗತಿಕರು, ದೀನದಲಿತರ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಸಮಾಜಕ್ಕೆ ಮಾದರಿ ಯಾಗಿದೆ. ಟ್ರಸ್ಟ್ ಸಂಸ್ಥಾಪಕರಾದ ದಿವಂಗತ ರೋಸಯ್ಯ ರವರು ತಮ್ಮ ಬದುಕನ್ನು ನಿರ್ಗತಿಕರು, ದೀನದಲಿತರ ಸೇವೆಗಾಗಿ ಸಮರ್ಪಿಸಿ ಕೊಂಡಿದ್ದರು. ಅವರ ದಾರಿಯಲ್ಲಿ ಅವರ ಪುತ್ರ ಆರ್. ಮೋಸಸ್ ಹಾಗು ಸ್ನೇಹಿತರು ಸಾಗುತ್ತಿರುವುದು ಹೆಮ್ಮೆಯ ವಿಚಾರ ವಾಗಿದ್ದು, ಬಡವರ ಕ್ರಿಸ್‌ಮಸ್ ಆಚರಣೆಯೊಂದಿಗೆ ಸಂಭ್ರಮಿಸುತ್ತಿ ರುವುದು ಅರ್ಥಪೂರ್ಣವಾಗಿದೆ ಎಂದರು.
ನಗರಸಭೆ ಸದಸ್ಯ ಐ.ವಿ ಸಂತೋಷ್ ಕುಮಾರ್, ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಆರ್.ಮೋಸಸ್, ಕಾರ್ಯ ದರ್ಶಿ ಬಿ.ಪ್ರಸಾದ್, ಪಾಸ್ಟರ್ ಗಳಾದ ಗಿಡಿಯೋನ್, ಅಬ್ರಹಾಂ ಗುಂಡಿ, ಜಯರಾಮ್, ಧನರಾಜ್, ಯೂತ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು, ತೆಲುಗು ಕ್ರಿಶ್ಚಿಯನ್ ಅಸೋಯೇಷನ್ ಅಧ್ಯಕ್ಷ ಭಾಸ್ಕರ್ ಬಾಬು, ವೈಎಂಸಿಎ ಸಾಮುಯಲ್ ಉಪಸ್ಥಿತರಿದ್ದರು.
ನಿಗರ್ತಿಕರು, ದೀನದಲಿತರಿಗೆ ಟವಲ್ ಹಾಗು ದಿನ ಬಳಕೆ ವಸ್ತುಗಳನ್ನು ಹಾಗು ಟ್ರಸ್ಟ್ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಉಡುಗೊರೆ ಗಳನ್ನು ನೀಡಲಾಯಿತು. ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ನಂತರ ನಿರ್ಗತಿಕರು, ದೀನದಲಿತರೊಂದಿಗೆ ಕ್ರಿಸ್‌ಮಸ್ ಹಬ್ಬದ ಭೋಜನ ನಡೆಯಿತು.