ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಾಡು ಪ್ರಾಣಿಗಳಿಂದ ಮಾನವರ ಮೇಲೆ ನಿರಂತರ ದಾಳಿ ಆಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರುನಾಡು ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ವೈ.ಶಶಿಕುಮಾರ್ ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಆನೆ, ಚಿರತೆ, ಕರಡಿ ದಾಳಿಯಿಂದ ಮೃತಪಟ್ಟ ವರು, ಶಾಶ್ವತ ಅಂಗವಿಕಲವಾದವರು ಹೆಚ್ಚಾಗುತ್ತಿದ್ದು, ಇದಕ್ಕೆ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ನೇರಹೊಣೆ ಎಂದು ಆರೋಪಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪ ಕಛೇರಿ ಬಿಟ್ಟು ಹೊರ ಹೋಗದೆ, ಅಕ್ರಮಗಳು ನಡೆದ ಸ್ಥಳ ಪರಿಶೀಲಿಸದೆ, ಭ್ರಷ್ಟ ಅಧಿಕಾರಿ ಗಳ ಮೇಲೆ ಕ್ರಮ ಕೈಗೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಕಿಡಿಕಾರಿದರು.
ಅರಣ್ಯದಲ್ಲಿ ಸೂಕ್ತ ಬಂದೋಬಸ್ತ್ ಗಾಗಿ ಸಿಬ್ಬಂದಿ ನೇಮಿಸದ ಕಾರಣ ಕಾಡು ಪ್ರಾಣಿ ಗಳ ಹಾವಳಿ ತಡೆಗಟ್ಟಲು ವಿಫಲವಾಗಿರುವುದು, ವೃತ್ತದ ವಲಯ ದಲ್ಲಿ ಅಕ್ರಮ ಮರ ಕಡಿತಲೆ ಅರಣ್ಯ ಒತ್ತುವರಿ ಗುಡ್ಡಗಳ ಒತ್ತುವರಿ ಮಣ್ಣು ಮಾಫಿಯಾ, ಕಾವಲುಗಾರರು (ವಾಚರ್) ಹೆಸರಿನಲ್ಲಿ ಹಣ ದುರುಪ ಯೋಗಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.
ಇತ್ತೀಚೆಗೆ ತರೀಕೆರೆ ಅರಣ್ಯ ವಲಯ ದಲ್ಲಿ ಚಿರತೆ ದಾಳಿಯಿಂದ ಮರಣ ಹೊಂದಿದ ಮಗುವಿಗೆ ಕೇವಲ ರೂ. 20ಲಕ್ಷ ಹಣ ನೀಡಿ ಕೈತೊಳೆದುಕೊಂಡಿ ರುವುದು ಖಂಡನೀಯ. ಮಗುವಿನ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡಬೇಕು. ಇದೇ ವಲಯದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ಮಗುವಿನ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರವನ್ನು ತಕ್ಷಣವೆ ನೀಡಬೇಕು ಹಾಗೂ 2 ವರ್ಷಗಳಿಗಿಂತ ಮೇಲ್ಪಟ್ಟ ಸೇವೆಯಲ್ಲಿರುವ ಆರ್ ಎಫ್ ಓ, ಎಸಿಎಫ್, ಸಿಸಿಎಫ್ ರವರನ್ನು ವರ್ಗಾವಣೆ ಗೊಳಿಸಿ ಕ್ರಮ ಕೈಗೊಳ್ಳ ಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.