ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳಲು ಮೌಲ್ಯಯುತ ಜೀವನಶೈಲಿ ಅಗತ್ಯ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾನವ ಸಂಪತ್ತು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜೆಸಿಐ ವಲಯ ಪೂವಾಧ್ಯಕ್ಷ ಮಲ್ಲಿಕಾರ್ಜುನ ಕಾನೂರ್ ಹೇಳಿದರು.
ಶುಭಂ ಹೋಟೆಲ್‌ನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಆಯೋಜಿಸಿದ್ದ ಜಡ್‌ಒಟಿಎಸ್ 2026 ಕಾರ್ಯಕ್ರಮ ದಲ್ಲಿ ಮಾತನಾಡಿ, ಮೌಲ್ಯ ಕೇವಲ ಹಣ ಪ್ರಧಾನವಾದ ಶಿಕ್ಷಣ ವಾಗದೆ ಗುಣಪ್ರಧಾನವಾದ ವ್ಯವಸ್ಥೆಯಾಗ ಬೇಕು. ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿ ಕೊಂಡಾಗ ಮಾತ್ರ ಸಾರ್ಥಕ ಬದುಕನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.
ಒಬ್ಬ ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯ, ಆ ವ್ಯಕ್ತಿತ್ವದ ಕಳಸಕ್ಕೆ ಜೀವನದ ಮೌಲ್ಯ ಗಳು ಶೋಭೆ ಯಂತಿವೆ. ನಿಸರ್ಗ ಮನುಷ್ಯ ಸಂತೋಷದಿಂದ ಬದುಕ ಬೇಕು ಅಂತ ಕಲಿಸುತ್ತದೆ. ನಿಸರ್ಗ ಮನುಷ್ಯನಿಗೆ ಪದೇಪದೇ ಕ್ಷಣ ಕ್ಷಣಕ್ಕೂ ಸಂತೋಷವಾಗಿರುವುದನ್ನೇ ಮಾಡಿದೆ. ತಾನು ತಮ್ಮದೆಂಬ ಮನೋಭಾವನೆಯಿಂದ ಹೊರ ಬಂದು ಪ್ರತಿಯೊಬ್ಬರು ಜೀವನ ಸಾಗಿಸಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕಾರ ಹಾಗೂ ಸಂಪತ್ತುಗಳೆಂಬ ಮೋಹದಲ್ಲಿ ಸಿಲುಕಿದ್ದು, ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇಂದಿನ ವಿದ್ಯಮಾನಗಳನ್ನು ಗುರುತಿಸಿ ದರೆ ಮನುಷ್ಯನ ಆಸೆಗಳು ಮಿತಿ ಮೀರಿವೆ. ಪೂರ್ವಿಕರು ಬಳುವಳಿ ಯಾಗಿ ನೀಡಿದ ಮಾನವೀಯ ಮೌಲ್ಯ ಗಳನ್ನು ಮರೆತು ಕೇವಲ ಸ್ವಾರ್ಥ ಮನೋಭಾವ ಮನೆ ಮಾಡಿದೆ. ಇದರಿಂದ ಸಮಾಜದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿರು ವುದು ದುರಂತ ಎಂದರು.
ಭ್ರಷ್ಟಾಚಾರವನ್ನು ಯಾರಿಂದಲೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಪ್ರಯತ್ನ ನಡೆಸಬೇಕಾಗಿ ರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದೇಶದ ಭವಿಷ್ಯ ಯುವಜನರು. ಅವರ ಪಾತ್ರ ಮಹತ್ವ ವಾದದ್ದು ಎಂದು ತಿಳಿಸಿದರು.
2025ರ ವಲಯಧ್ಯಕ್ಷ ಜೆಸಿಐ ಸೆನೆಟರ್ ಗೌರೀಶ್ ಭಾರ್ಗವ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ನಿರ್ದೇಶಕ ಅನುಷ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ತರಬೇತುದಾರ ಜಿ.ಸೂರ್ಯ ನಾರಾಯಣ ವರ್ಮಾ, ನಿಯೋಜಿತ ವಲಯಾಧ್ಯಕ್ಷ ಮಧುಸೂದನ ನಾವಡ, ನಿಯೋಜಿತ ಉಪಾಧ್ಯಕ್ಷ ಗಣೇಶ್, ರಮೇಶ್ ಪೈ, ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ನಿಯೋಜಿತ ಅಧ್ಯಕ್ಷೆ ಮಂಜುಳಾ ಕೇಶವ್, ಕಾರ್ಯದರ್ಶಿ ವಿಜಯಲಕ್ಷ್ಮೀ ಕದಂಬ, ಗಣೇಶ್ ವಿಜಯಕುಮಾರ್, ವಲಯ ಪದಾಧಿಕಾರಿಗಳು ಮತ್ತು ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ಸದಸ್ಯರು ಇದ್ದರು.
Tags
ಶಿವಮೊಗ್ಗ ವರದಿ