ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರತಿಯೊಬ್ಬರು ಜನ್ಮದಿನ ಗಳನ್ನು ಅದ್ದೂರಿಯಾಗಿ ಆಚರಿಸದೆ, ಸರ್ಕಾರಿ ಶಾಲಾ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನಕ್ಕಾಗಿ ಪರಿಕರ ವಿತರಿಸು ವಲ್ಲಿ ಮುಂದಾಗಬೇಕು ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯ ಬಸವ ರಾಜ್.ಬಿ ಆನೆಕೊಪ್ಪ ಹೇಳಿದರು.
ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಿ.ಎಸ್. ಬಸವೇಶ್ ಜನ್ಮದಿನದ ಅಂಗವಾಗಿ ಮಂಗಳವಾರ ಕಾಗದ ನಗರದ ಸರ್ಕಾರಿ ಕನ್ನಡ, ತಮಿಳು ಮತ್ತು ಉರ್ದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪರಿಕರ ವಿತರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಲಭಿಸ ಬೇಕು. ಕ್ಷೇತ್ರದಲ್ಲಿ ಹೆಚ್ಚಿನ ರಾಜಕೀಯ ಶಕ್ತಿ ತುಂಬುವಂತಾಗಬೇಕು. ಯುವ ಮುಖಂಡ ಬಿ.ಎಸ್.ಗಣೇಶ್ ರಾಜಕೀಯ ಶಕ್ತಿ ಕಂಡುಕೊಳ್ಳಲು ಬಯಸಿದ್ದು, ಅವರನ್ನು ಸಹ ಬೆಂಬಲಿ ಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸರ್ಕಾರಿ ಪಶ್ಚಿಮ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್ ಉಜ್ಜನಿಪುರ ಮಾತನಾಡಿ, ದಾನಿಗಳಿಂದ ಸಣ್ಣ ಪ್ರಮಾಣದಲ್ಲಿ ಹೆಚ್ಚಿನ ನೆರವುಗಳು ಲಭಿಸಿದಾಗ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ. ಚನ್ನಪ್ಪ, ಕಲಾವಿದ ರವಿಕುಮಾರ್, ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ರಘುವೀರ್, ಚಂದ್ರನಾಯ್ಕ, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.