ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಾಸಕ ಬಿ.ಕೆ ಸಂಗಮೇಶ್ವರ್ ರವರ ದ್ವಿತೀಯ ಪುತ್ರ, ಯುವ ಮುಖಂಡ ಬಿ.ಎಸ್.ಬಸವೇಶ್ ರವರ ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ಅದಿ ದೇವತೆ ಶ್ರೀ ಹಳದಮ್ಮದೇವಿ ದೇವಸ್ಥಾನ ಆವರಣ ದಲ್ಲಿ ಕೇಸರಿ ಪಡೆ ಕೆ.ಪಿ.ಗಿರೀಶ್ ಸಾರಥ್ಯದಲ್ಲಿ ವಿಶ್ವನಾಥ್, ಸುಜಿತ್ ಹಾಗು ಕೆಪಿಜಿ ಗ್ರೂಪ್ಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೋಮವಾರ ಆಯೋಜಿಸಲಾಗಿತ್ತು.
ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಹಾಗು ನಗರದ ರೇಣುಕಾ ಕ್ಲಿನಿಕ್ ವೈದ್ಯರಾದ ಡಾ.ಎಂ.ಆರ್ ರಕ್ಷಿತ್‌ರವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಹೃದಯ, ಕೀಲು, ಮೂಳೆ, ನರರೋಗ, ರಕ್ತದೊತ್ತಡ(ಬಿ.ಪಿ), ಜಿ.ಆರ್. ಬಿ.ಎಸ್.ಸಿ((ಮಧುಮೇಹ), ಇಸಿಜಿ ಹಾಗು ಸಾಮಾನ್ಯ ರೋಗಗಳ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಸಹ ನಡೆಯಿತು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಥಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್ ಸೇರಿದಂತೆ ಕೆಪಿಜಿ ಗ್ರೂಪ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 500 ಜನ ಶಿಬಿರದ ಸದುಪಯೋಗ ಪಡೆದುಕೊಂಡರು.