ಭದ್ರಾವತಿ-ಫೆ:1 ಕ್ಕೆ ಕಾಮ್ರೇಡ್ ಮಾಯಣ್ಣ, ಕಾಳೇಗೌಡರಿಗೆ ನುಡಿನಮನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವಿಐಎಸ್‌ಎಲ್‌ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಟಿಯುಸಿ ಸಂಯೋಜಿತ) ವತಿಯಿಂದ ಫೆ.1ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಐಎಸ್‌ಎಲ್, ಎಂಪಿಎಂ ಮತ್ತು ಇತರೆ ಕಾರ್ಮಿಕ ಸಂಘಗಳ ಅಸಂಘಟಿತ, ಬಡ ಕಾರ್ಮಿಕರ, ದೀನದಲಿತರ, ರೈತ ಹೋರಾಟಗಳ ಹಾಗೂ ಪ್ರಗತಿಪರ ಹೋರಾಟಗಳ ನಾಯಕರಾದ ದಿವಂಗತ ಕಾಮೇಡ್ ಡಿ.ಸಿ.ಮಾಯಣ್ಣ ಮತ್ತು ಕಾಮೇಡ್ ಕಾಳೇಗೌಡ ಅವರಿಗೆ ನುಡಿ- ನಮನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.

ನ್ಯೂಟೌನ್ ನಲ್ಲಿರುವ ಅಸೋಸಿ ಯೇಷನ್‌ ಕಚೇರಿಯಲ್ಲಿ ಆಯೋಜಿಸ ಲಾಗಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸುವಂತೆ ವಿಐಎಸ್‌ಎಲ್‌ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಐಸಾಕ್ ಲಿಂಕನ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಮನವಿ ಮಾಡಿದ್ದಾರೆ.

ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಸ್ವಾತಿ ಸುಂದರೇಶ್‌ ಉದ್ಘಾಟಿಸುವರು. ರಾಷ್ಟ್ರೀಯ ಮಂಡಳಿ ಸದಸ್ಯ ಕಾಮ್ರೇಡ್ ಪಿ.ವಿ.ಲೋಕೇಶ್, ಕಾಮ್ರೇಡ್ ರಾಧಾ ಸುಂದರೇಶ್, ರಾಜ್ಯ ಸಹ ಕಾರ್ಯದರ್ಶಿ ಕಾಮ್ರೇಡ್ ಎಚ್.ಎಂ.ಸಂತೋಷ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ. ಸಂಗಮೇಶ್ವರ್‌ ಸೇರಿದಂತೆ ಇತರರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು