ಸರ್ಕಾರಿ ಉರ್ದು ಶಾಲಾ ಮಕ್ಕಳಿಗೆ ಉಚಿತ ಡೆಸ್ಕ್ಉಡುಗೊರೆ

ವಿಜಯ ಸಂಘರ್ಷ ನ್ಯೂಸ್ 
ಶಿಕಾರಿಪುರ: ಶಾಲಾ ಶಿಕ್ಷಕರು ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಸಂಸ್ಕಾರ ಗುಣ ಬೆಳೆಸಿಕೊಳ್ಳುವ ಮನೋಭಾವನೆ ಹೊಂದಬೇಕು ಎಂದು ಕಾಂಗ್ರೆಸ್ ಮುಖಂಡರಾದ ನಿರ್ಮಲ ಪಾಟೀಲ್ ಅಭಿಪ್ರಾಯ ಪಟ್ಟರು.

ಪಟ್ಟಣದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲಾ ಎಮ್ ಎಸ್ ಮೊಹಲ್ಲಾ ಶಾಲೆಯ ವತಿಯಿಂದ ಏರ್ಪಡಿಸಿದ್ದ ಉಚಿತವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಡೆಸ್ಕ್ .ಟೇಬಲ್ ನಲಿಕಲಿ ಛೇರ್ ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿ ಗಳು ನೆಲದಲ್ಲಿ ಕುಳಿತು ಓದುವ ಜೊತೆಗೆ ಇಂದು ಛೇರ್ ಮೇಲೆ ಕುಳಿತು ಕೊಳ್ಳುವ ಸದಾವಕಾಶ ಕಲ್ಪಿಸಲಾಗಿದೆ.ಇಂದಿನ ದಿನದಲ್ಲಿ ಗಳಿಸಿದ ಆಸ್ತಿ ಕಸಿದುಕೊಳ್ಳ ಬಹುದು ಆದರೆ ವಿದ್ಯೆಯನ್ನು ಯಾರು ಕಸಿದು ಕೊಳ್ಳಲು ಸಾಧ್ಯವಿಲ್ಲ ಎಂದರು.

ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಸರ್ಕಾರದ ಎಲ್ಲಾ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುನ್ನುಗ್ಗಬೇಕಿದೆ. ತಂದೆ ತಾಯಿ ಗುರುಗಳ ಮಾರ್ಗದರ್ಶನದಿಂದ ಉತ್ತಮ ಪ್ರಜೆಯಾಗ ಬೇಕಿದೆ ಹಾಗೂ ಸರ್ಕಾರಿ ನೌಕರಿ ಪಡೆದು ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಕಿವಿ ಮಾತು ಹೇಳಿದರು.

ವಕೀಲರಾದ ರವೀಂದ್ರ ಪಾಟೀಲ್ ಜಂಬೂರು ಮಾತನಾಡಿ,ಸಮಾಜ ಸೇವೆ ಯಿಂದ ನಮಗೆ ತೃಪ್ತಿಯಾಗಿದೆ. ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಸೇವೆ ಮಾಡಲು ಸದಾ ಸಿದ್ದನಾಗಿದ್ದೇನೆ. ಬಹುದಿನದ ಕನಸು ಇದಾಗಿದ್ದು ನಲಿ ಕಲಿ ಛೇರ್ ಮತ್ತು ಬೆಂಚ್ ಡೆಸ್ಕ್ ಗಳನ್ನು ಕೊಡುಗೆ ಯಾಗಿ ನೀಡಿದ್ದು ಮಕ್ಕಳ ಮುಖದಲ್ಲಿ ಸಂತೋಷ ಕಂಡು ಸಾರ್ಥಕತೆ ಉಂಟಾಯಿತು. ತಮಗಿಂತಲೂ ತಮ್ಮ ಎದುರುಗಿರುವರು ಸಂತೋಷವಾಗಿರ ಬೇಕು ಎಂಬುದು ತಮ್ಮ ಆಶಯ. ಶಿಕ್ಷಕರು ವಿದ್ಯಾರ್ಥಿಗಳ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದರು.

ಪುರಸಭಾ ಸದಸ್ಯೆ ಜಯಶ್ರೀ,ಎಸ್ ಡಿ ಎಂ ಸಿ ಅಧ್ಯಕ್ಷ ರಶೀದ್ ಅಹ್ಮದ್ ಮುಖ್ಯೋಪಾ ಧ್ಯಾಯನಿ ಚರಿಷ್ಮ ಪಾಟೀಲ್,ರೇಖಾ, ಮುಸ್ಲಿಂ ಕಮಿಟಿ ಅಧ್ಯಕ್ಷ ಅಹ್ಮದ್ ಸಾಬ್, ಮುಕ್ತಿಯರ್, ಜಾವೀದ್,ಆಯುಬ್,ಅಹ್ಮದ್ ಮುನ್ವರ್ ಸಾಬ್,ಇಮ್ರಾನ್,ಮೌಲಾನ,
ಶಬಾನ ಭಾನು, ಶಾಹಿಸ್ತಾ ಖಾನಂ, ಜಬಿವುಲ್ಲಾ,ವಿದ್ಯಾರ್ಥಿಗಳ ಪೋಷಕರು ಶಾಲಾ ಸಿಬ್ಬಂದಿ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು