ಭದ್ರಾವತಿ-ಅಡಕೆ ತೋಟದಲ್ಲಿ ಪಂಪ್ ಸೆಟ್ ಕಳವು: ದೂರು

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ತಾಲೂಕಿನ ಕಾಚಗೊಂಡನ ಹಳ್ಳಿ ಗ್ರಾಮದ ನಿವಾಸಿ, ಶಿಮೂಲ್ ನಿರ್ದೇಶಕ ಡಿ. ಆನಂದರವರ ತೋಟದಲ್ಲಿ ಅಳವಡಿಸ ಲಾಗಿದ್ದ ನೀರಿನ ಪಂಪ್‌ಸೆಟ್ ಮೋಟಾರ್ ಕಳವು ಮಾಡಿರುವ ಘಟನೆ ನಡೆದಿದೆ. 


ಗ್ರಾಮದ ಸ.ನಂ. 15 ರಲ್ಲಿ 1 ಎಕರೆ 32 ಗುಂಟೆ ಅಡಕೆ ತೋಟವಿದ್ದು, ನೀರು ಪೂರೈಕೆ ಮಾಡಲು 2 ಎಚ್.ಪಿ ವಿದ್ಯುತ್ ಚಾಲಿತ ನೀರಿನ ಪಂಪ್ ಸೆಟ್ ಮೋಟಾರ್ ಅಳವಡಿಸಿದ್ದಾರೆ. ಡಿ.28 ರ ರಾತ್ರಿ ಮೋಟಾರ್ ಕಳುವಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಜ.13 ರಂದು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸುಮಾರು 15 ಸಾವಿರ ರು. ಮೌಲ್ಯದ ಪಂಪ್ ಸೆಟ್ ಕಳವು ಮಾಡಲಾಗಿದೆ. ಪತ್ತೆಮಾಡಿ ಕಳವು ಮಾಡಿರಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳು ವಂತೆ ದೂರಿನಲ್ಲಿ ಕೋರಿದ್ದಾರೆ. 


ಈಗಾಗಲೇ ಈ ಭಾಗದಲ್ಲಿ ಹಲವಾರು ಪಂಪ್ ಸೆಟ್ ಮೋಟಾರ್‌ಗಳ ಕಳ್ಳತನ ವಾಗಿದ್ದು, ಆದರೆ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಪಂಪ್ ಸೆಟ್ ಕಳವು ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತಕಾಪಾಡುವಂತೆ ಮನವಿ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು