ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಭದ್ರಾ ಎಡದಂಡೆ ನಾಲೆ ಯಲ್ಲಿ ಬಟ್ಟೆ ತೊಳೆಯಲು ನಾಲೆಗೆ ತೆರಳಿದ ಒಂದೇ ಕುಟುಂಬದ ನಾಲ್ವರಿ ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ತಾಲ್ಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿ ಘಟನೆ ಸಂಭವಿಸಿದೆ. ನೀಲಾಬಾಯಿ, ಅವರ ಮಗ ರವಿಕುಮಾರ್, ಮಗಳು ಶ್ವೇತಾ, ಅಳಿಯ ಪರಶುರಾಮ್ ನಾಪತ್ತೆಯಾಗಿದ್ದಾರೆ.
ಭದ್ರಾ ಎಡದಂಡೆ ನಾಲೆಯಲ್ಲಿ ಬಟ್ಟೆ ಒಗೆಲು ಬಂದಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಾಲೆಗೆ ಜಾರಿದವರ ರಕ್ಷಣೆಗೆ ಹೋದವರು ಒಬ್ಬೊಬ್ಬರಾಗಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ನಾಲ್ವರ ಶೋಧ ಕಾರ್ಯ ನಡೆಯುತ್ತಿದ್ದು, ಗ್ರಾಮದ ಜಾತ್ರೆಯ ಹಿನ್ನೆಲೆಯಲ್ಲಿ ಅಳಿಯ ಪರಶುರಾಮ್ ಮತ್ತು ಪತ್ನಿ ಶ್ವೇತಾರ ಜೊತೆ ಮಾವನ ಮನೆಗೆ ಬಂದಿದ್ದರು. ಗ್ರಾಮದ ತುರುಮಂದಿ ಬೀದಿಯಲ್ಲಿದ್ದ ತಾಯಿ ನೀಲಾಬಾಯಿ(50) ಮತ್ತು ಮಗ ರವಿ (21) ಶಿಕಾರಿಪುರ ಬೆಂಡೆಕಟ್ಟಿಯ ಅಳಿಯ ಪರಶುರಾಮ್ (33) ಮತ್ತು ಮಗಳಾದ ಶ್ವೇತಾ (28) ನೀರು ಪಾಲಾಗಿದ್ದಾರೆ.
ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ. ಕಾರಿಯಪ್ಪ, ಡಿವೈಎಸ್ಪಿ ಪ್ರಕಾಶ್ ರಾಥೋಡ್, ಹೊಳೆಹೊನ್ನೂರು ಪಿಐ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಧ್ಯಾಹ್ನ 2-30 ರ ವೇಳೆಗೆ ನಡೆದ ಈ ಘಟನೆಯ ಶೋಧಕಾರ್ಯ ಸುಮಾರು 3-30 ರ ಸಮಯದಲ್ಲಿ ನಡೆದಿದೆ. ಸಧ್ಯಕ್ಕೆ ಅಗ್ನಿಶಾಮಕದಳದ ಶೋಧಕಾರ್ಯ ನಿಂತಿದೆ. ನಾಲೆಯಲ್ಲಿ ಹೆಚ್ಚಿನ ನೀರು ಇರುವುದರಿಂದ ಯಾವುದೇ ಫಲಿತಾಂಶ ದೊರೆತಿಲ್ಲ. ಈಶ್ವರ್ ಮಲ್ಪೆ ಸಹ ಶೋಧಕಾರ್ಯದಲ್ಲಿ ನಾಳೆ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.