ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ನಗರದ ಭೂತನಗುಡಿಯ ವಾಸಿಗಳಾದ ವೃದ್ದ ದಂಪತಿ ಚಂದ್ರಪ್ಪ (80) ಮತ್ತು ಪತ್ನಿ ಜಯಮ್ಮ (70) ನಿಗೂಢವಾಗಿ ಸಾವುಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಚಂದ್ರಪ್ಪ ಹಾಗು ಇವರ ಪತ್ನಿ ಜಯಮ್ಮ ಸಾವುಗೊಂಡಿದ್ದು, ಮನೆಯಲ್ಲಿ ಇವರಿಬ್ಬರು ಮಾತ್ರ ವಾಸವಿದ್ದರು. ಇವರಿಗೆ ಮೂವರು ಗಂಡು ಮಕ್ಕಳಿದ್ದು, ಬೇರೆ ಊರುಗಳಲ್ಲಿ ವಾಸವಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ವಾರ್ಡಿನ ನಗರಸಭೆ ಸದಸ್ಯೆ ಅನುಸುಧಾ ಮೋಹನ್ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ವಿಶೇಷ ತನಿಖಾ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದರು.