ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ. ತಾಲ್ಲೂಕಿನ ಸಂತೆ ಬಾಚಹಳ್ಳಿ ಕೈಗೊನಹಳ್ಳಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿ ನೂತನ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ವಿವಿಧ ಪೂಜೆ ಹೋಮ ಹವನಗಳ ಮೂಲಕ ಅದ್ದೂರಿಯ ಶ್ರೀ ಮುನೇಶ್ವರಸ್ವಾಮಿ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಬಳಿಕ ವಿವಿಧ ಪೂಜಾ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಮಾತನಾಡಿದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ನಮ್ಮ ಗ್ರಾಮ ಪಾಳ್ಳೇಗಾರರು ಇತಿಹಾಸವುಳ್ಳ ಗ್ರಾಮ ಎಂಬ ಹೆಗ್ಗಳಿಕೆ ಇದೆ ಗ್ರಾಮದಲ್ಲಿ ಇಂದಿನಿಂದಲೂ ಯಾವುದೇ ಹಬ್ಬ ಹರಿದಿನ ಗಳು,ದೇವಸ್ಥಾನ ಅಭಿವೃದ್ಧಿಗೆ ಜಾತಿ ಮತ ಪಕ್ಷ ಭೇದ ಮಾಡದೆ ಈಗಾಗಲೇ ವೀರಭದ್ರೇಶ್ವರ ಸ್ವಾಮಿ ಮಾರಮ್ಮ ದೇವಸ್ಥಾನ ಮಾದರಿಯಲ್ಲೇ ನಮ್ಮ ಗ್ರಾಮದ ಕೆಂಪೇಗೌಡರು 50 ವರ್ಷಗಳಿಂದ ಪೂಜಿಸುತ್ತಿದ್ದ ಶ್ರೀ ಮುನೇಶ್ವರಸ್ವಾಮಿ ಎಂದು ಗೋಚರಿಸಿ ಹುತ್ತದ ಮೂಲಕ ಗೋಚರಿಸಿ ಒಂದು ಸಣ್ಣ ಗುಡಿಸಿಲಿನಂತೆ ಇದ್ದ ಜಾಗದಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದರು.
ದಿನದಿಂದ ದಿನಕ್ಕೆ ಭಗವಂತ ಅನುಗ್ರಹ ದಿಂದ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ದಾನಿಗಳು ಗ್ರಾಮಸ್ಥರು ಸಹಕಾರದಿಂದ ಇಂದು ಸುಂದರ ವಾಗಿ ನೂತನ ದೇವಾಲಯ ಲೋಕಾರ್ಪಣೆ ಗೊಂಡಿದೆ ಎಂದು ತಿಳಿಸಿದ ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ಎರಡು ದಿನದ ದೇವಾಲಯ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನ ವಹಿಸಿಕೊಂಡಿದ್ದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ದೇವಾಲಯದ ನಿರ್ಮಾಣಕ್ಕೆ ಆರ್ಥಿಕ ಧನ ಸಹಾಯ ನೀಡಿದರು.
ಶುಕ್ರವಾರ ರಾತ್ರಿ ಗ್ರಾಮದ ದೇವರು ಗಳಾದ ಶ್ರೀ ವೀರಭದ್ರೇಶ್ವರ, ಶನೇಶ್ವರ, ಮುನೇಶ್ವರ, ದೇವರುಗಳ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ವೀರಗಾಸೆ ಡೊಳ್ಳು ಕುಣಿತದ ಮೂಲಕ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಹಿರಿಯ ಮುಖಂಡರಾದ ಪಟೇಲ್ ಚಿಕ್ಕೇಗೌಡ, ನಂಜಪ್ಪ ಕೆ.ಕೆ, ಕೈಗೋನಹಳ್ಳಿ ಕುಮಾರ್, ಖಜಾಂಚಿ ನಂಜಪ್ಪ, ಸರ್ವೇ ಮಂಜೇಗೌಡ, ದಿಲೀಪ್, ಶೇಂಕರೇ ಗೌಡ, ಮರೀಸ್ವಾಮಿ ಗೌಡ, ಗೌಡಪ್ಪ, ಮುದ್ದೇಗೌಡ,ರಂಗಣ್ಣ, ಉದ್ಯಮಿ ಬಜಾಜ್ ಸಂತೋಷ್, ಯೋಗೇಶ್, ಗ್ರಾ. ಪಂ ಸದಸ್ಯ ಆನಂದ್, ನಂಜಪ್ಪ, ಅರ್ಚಕ ಕೆಂಪೇಗೌಡ,ನಿಂಗರಾಜು, ರವಿ,ನಾಗರಾಜು,ಮಾಜಿ ಸಚಿವ ಕೆ ಸಿ ನಾರಾಯಣ ಗೌಡ ರ ಆಪ್ತ ಸಹಾಯಕ ದಯಾನಂದ,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಯುವ ಮುಖಂಡ ಪ್ರೀತಮ್, ಶೀಳನೆರೆ ಅಜಯ್, ಪ್ರಕಾಶ್, ಅಭಿಷೇಕ್, ಸೇರಿದಂತೆ ಭಕ್ತರಿದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
Tags
ಕೆ ಆರ್ ಪೇಟೆ ವರದಿ