ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ನ್ಯೂಟೌನ್ ಮೆಸ್ ರಸ್ತೆಯ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5 ನೇ ವಾರ್ಷಿಕೋತ್ಸವ ಮಾ.4 ರ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಡಾ:ಜ್ಯೋತಿ ಸೋಮಶೇಖರ್ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 5 ವರ್ಷಗಳಿಂದ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಯಶಸ್ವಿ ಯಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು.
ಆಶ್ರಮದಲ್ಲಿ ವಯೋವೃದ್ಧರು ಹಾಗು ಅನಾಥರ ಬಗ್ಗೆ ಆಶ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾ ಮನೋಭಾವ ಹೊಂದಿರುವ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೆ ಕುಟುಂಬ ಸದಸ್ಯ ರಂತೆ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ಅಗತ್ಯವಿರುವ ಸೌಕರ್ಯಗಳನ್ನು ಹೊಂದಿದೆ.
ಜನಪ್ರತಿನಿಧಿಗಳು, ದಾನಿಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರು ಹೆಚ್ಚಿನ ಸಹಕಾರ ನೀಡುವ ಮೂಲಕ ವೃದ್ದರು, ಅನಾಥರ ನೆರವಿಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖ ರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.