ಭದ್ರಾವತಿ-ನಾಳೆ ಬೆಳಿಗ್ಗೆಯಿಂದ ಸಂಜೆ ವರೆಗೂ ಇಲ್ಲೆಲ್ಲಾ ಕರೆಂಟ್ ಇರಲ್ಲ..!

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ 220 ಕೆ ವಿ ಎಮ್.ಆರ್.ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66/11 ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿ ಕೊಂಡಿರುವುದರಿಂದ ಸೀಗೆಬಾಗಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾ: 5 ರ ನಾಳೆ ಗುರುವಾರದಂದು ಬೆಳಿಗ್ಗೆ 09:30 ಘಂಟೆಯಿಂದ ಸಂಜೆ 06.00 ಘಂಟೆ ಯವರೆಗೆ ಮಂ.ವಿ.ಸ.ಕಂ ನಗರ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ವ್ಯತ್ಯೆಯ :-

ಹಳೇನಗರ, ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ. ಘಟಕ, ತಾಲ್ಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿನ ಬಾಗಿಲು, ಹಳ್ಳದಮ್ಮನವರ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಳೆ ಹೊನ್ನೂರು ರಸ್ತೆ, ಖಲಂದರನಗರ, ಜಟ್ ಪಟ್‌ ನಗರ, ಅನ್ವರ್‌ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್ ಜಾನ್ ಕಾಲೋನಿ, ಹೊಸಮನೆ, ಎಸ್.ಎಂ.ಸಿ.ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, 

ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನುಮಂತನಗರ, ತಮ್ಮಣ್ಣ ಕಾಲೋನಿ, ಸುಭಾಷ ನಗರ, ವಿಜಯನಗರ, ಕುವೆಂಪು ನಗರ, ನೃಪತುಂಗ ನಗರ, ಸೈಯ್ಯದ್ ಕಾಲೋನಿ, ಸೀಗೇಬಾಗಿ, ಹಳೇ ಸೀಗೇ ಬಾಗಿ, ಅಶ್ವತ್ಥನಗರ, ಕಬಳೀಕಟ್ಟೆ, ಭದ್ರಾಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಗೌರಾಪುರ, ಕೃ.ಉ.ಮಾ.ಸ.(ಎ.ಪಿ.ಎಮ್.ಸಿ), 

ಗಾಂಧಿ ವೃತ್ತ, ಕೋಡಿಹಳ್ಳಿ, ಅರಳೀ ಹಳ್ಳಿ, ಬದನೆ ಹಾಳು, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಳ್ಳಿ, ಕಲ್ಪನಹಳ್ಳಿ, ಮಣ್ಣಗೇನಹಳ್ಳಿ, ಗೌಡರಹಳ್ಳಿ, ಖಾಬಳ್ಳಿ, ವೀರಾಪುರ, ಶ್ರೀರಾಮನಗರ, ಕಲ್ಲಾಪುರ, ದಾನವಾಡಿ, ಡಿ.ಬಿ.ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ, ಕಲ್ಲಹಾಳ್‌, ಅರಬಿಳಚಿ, ತಳ್ಳಿಕಟ್ಟಿ, ಕುಮರಿ ನಾರಾಯಣಪುರ, ತಿಮ್ಲಾಪುರ, ಅತ್ತಿಗುಂದ, ಗುಡ್ಡದ ನೇರಳೆ ಕೆರೆ, ದೇವರಹಳ್ಳಿ, ಕುಮಾರನಹಳ್ಳಿ, ಬಸಲಿ ಕಟ್ಟೆ ಸುತ್ತ ಮುತ್ತಲು ವಿದ್ಯುತ್ ವ್ಯತ್ಯೆಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು