ಎಸ್‌ಸಿ-ಎಸ್‌ಟಿ ಸಾಧಕರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗ ದವರ ಶ್ರೇಯಸ್ಸಿಗಾಗಿ ಪ್ರೋತ್ಸಾಯಿಸಿ, ಶ್ರಮಿಸಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

2026-27ನೇ ಸಾಲಿನಲ್ಲಿ ಏ: 05 ರಂದು ಡಾ.ಬಾಬು ಜಗಜೀವನರಾಂ ರವರ 119ನೇ ಜನ್ಮದಿನಾಚರಣೆ ಹಾಗೂ ಏ: 14 ರಂದು ಡಾ.ಬಿ ಆರ್. ಅಂಬೇಡ್ಕರ್‌ ರವರ 135 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿದಾರರು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಮಾ: 9 ರೊಳಗೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸ ಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 ಕಾಮೆಂಟ್‌ಗಳು

  1. ವಿಷಯ ತುಂಬಾ ಚೆನ್ನಾಗಿದೆ ಆದರೆ, ಪ್ರಶಸ್ತಿಯ ರೂಪುರೇಷವನ್ನು ಸ್ವಲ್ಪ ಬದಲಿಸಿಕೊಂಡರೆ ಉತ್ತಮವೆಂದು ಅನಿಸಿತು.
    ಪ್ರಶಸ್ತಿಯನ್ನು ತನಗೆ ನೀಡಬೇಕು ಅದಕ್ಕೆ ಉತ್ತಮ ಅಭ್ಯರ್ಥಿ ನಾನು ಎಂದು ಬೇಡಿಕೊಂಡು ಪ್ರಶಸ್ತಿಯನ್ನು ಪಡೆದುಕೊಳ್ಳುವಂತಹ ಸ್ಥಿತಿಗತಿಗೆ ಸಮಾಜ ಕಲ್ಯಾಣ ಇಲಾಖೆ ಇಳಿದಿರುವುದು ತೀರಾ ನಾಚೀಗೇಡಿನ ವಿಷಯ.
    ಒಂದು ಪ್ರಶಸ್ತಿಯನ್ನು ನೀಡಬಯಸುವ ಸರ್ಕಾರ ಅಥವಾ ಇನ್ನಿತ್ತರ ಸಂಸ್ಥೆಗಳೆ ಅಂತಹ ಸೂಕ್ತ ಅಭ್ಯರ್ಥಿಯನ್ನು ಹುಡುಕಿ ಕೊಡಬೇಕು.
    ಅದುವೆ ನಿಮ್ಮ ಪ್ರಶಸ್ತಿ ಮತ್ತು ಸಂಸ್ಥೆಗೆ ಸರಕಾರಕ್ಕೆ ಮತ್ತು ಆ ನಿರ್ದಿಷ್ಟ ಪ್ರಶಸ್ತಿಗೆ ಗೌರವ ತರುವುದು.
    ಸಾಧ್ಯವಾದರೆ ಈ ಮೇಲಿನ ನನ್ನ ಅನಿಸಿಕೆಯನ್ನು ಅರ್ಥಮಾಡಿಕೊಳ್ಳಿ.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು