ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಮಹಿಳಾ ಘಟಕದ ಪದಾಧಿಕಾರಿಗಳು ನೇಮಕ ಮಾಡಲಾಗಿದೆ.
ಸೋಮವಾರ ನ್ಯೂಟೌನ್ ಅಮಲೋದ್ಬವಿ ಮಾತೇ ದೇವಾಲ ಯದ ಆವರಣದಲ್ಲಿ ನಡೆದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾಗಿ ಎಲ್ಸಿ ಡಿಸೋಜ, ಅಧ್ಯಕ್ಷರಾಗಿ ಜೆಸ್ಸಿ ಬೆನೆಟ್ ಗೋನ್ಸಾಲ್ವಿಸ್, ಉಪಾಧ್ಯಕ್ಷ ರಾಗಿ ಎಸ್ತರ್, ಕಾರ್ಯದರ್ಶಿ ಯಾಗಿ ನಿರ್ಮಲ ಪೀಟರ್, ಸಹ ಕಾರ್ಯದರ್ಶಿ ಯಾಗಿ ಕ್ಲೇರಿಟಾ ಡಿಸೋಜ, ಸಲಹೆ ಗಾರರಾಗಿ ವಿನ್ನಿ ಡಿಸೋಜಾ, ಐರಿನ್ ಪೀಟರ್, ಪ್ರಮೀಳಾ ಮೇರಿ, ಕ್ಲಿಯೋನ್ ಡಿಕೋಸ್ಟಾ, ಫಿಲೋಮೀನ ದಾಸ್, ಸೇಲ್ವಿನ್ ರೋಜಾ ನೇಮಕ ಮಾಡಲಾಗಿದೆ.
ಮುಖ್ಯ ಅತಿಥಿಗಳಾಗಿ ಫಾದರ್ ಸ್ಟೇವನ್ ಡೆಸಾ,ಫಾದರ್ ಡೊಮಿನಿಕ್ ಕ್ರಿಸ್ತ ರಾಜ್, ಫಾದರ್ ಕ್ರೈಸ್ತರಾಜು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗನ್ನಾಥ್. ಉದ್ಯಮಿ ಬಿ.ಕೆ. ಶಿವಕುಮಾರ್ ಸೇರಿದಂತೆ ಸಂಘದ ಸುಮಾರು 200 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.