ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪಿನ ಶ್ರೀ ಮಾರಿ ಕಾಂಬ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಬೆಳ್ಳಿಯ ಮುಖವಾಡ, ಬಂಗಾರದ ತಾಳಿ, ಇನ್ನಿತರೆ ವಸ್ತು ಗಳನ್ನು ಕದ್ದಿದ್ದ ಕಳ್ಳನನ್ನು ಹೊಳೆ ಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ಉಮೇಶ(45) ಬಂಧಿತ ಆರೋಪಿ ಯಾಗಿದ್ದು, ಆತನಿಂದ ಎರಡು ಬೆಳ್ಳಿ ಮುಖವಾಡಗಳು, ನಾಲ್ಕು ಬೆಳ್ಳಿಯ ಕೈಗಳು, ಸೊಂಟದ ಪಟ್ಟಿ, ಬಂಗಾರದ ತಾಳಿ, ಮೂಗುತಿ ಗುಂಡು ಗಳು ಹಾಗೂ ಕುಂಸಿ ಠಾಣಾ ವ್ಯಾಪ್ತಿಯ ದುರ್ಗಾಂಬಿಕಾ ದೇವಿಯ ಮುಖವಾಡ, ಪಾದುಕೆ, ಚಾಮರ ಸೇರಿದಂತೆ ಒಟ್ಟು 3.764 ಕೆ.ಜಿ. ಬೆಳ್ಳಿಯ ಆಭರಣ, 8 ಗ್ರಾಂ ತೂಕದ ಬಂಗಾರದ ಆಭರಣ, ಬೈಕ್ ಸೇರಿದಂತೆ ಅಂದಾಜು 10.49 ಲಕ್ಷ ರೂ.,ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಟಿ.ಬೈಲಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ಮಾ.8 ರಂದು ದಾಖಲಾಗಿದ್ದು, ಒಂದೇ ದಿನದಲ್ಲಿ ಹೊಳೆಹೊನ್ನೂರು ಠಾಣೆಯ ಇನ್ಸ್ ಪೆಕ್ಟರ್ ಎಂ.ಶಿವಪ್ರಸಾದ್ ಮತ್ತು ತಂಡ ಕಳ್ಳನನ್ನು ಬೇಟೆಯಾಡಿದೆ.
ಎಸ್ ಪಿ ನಿಖಿಲ್ ನೇತೃತ್ವದಲ್ಲಿ ಭದ್ರಾವತಿ ಡಿವೈಎಸ್ ಪಿ ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು. ತಂಡದಲ್ಲಿ ಪಿಎಸ್ ಐ ಶಾಂತಲಾ, ಹೆಚ್ ಸಿ ಅಣ್ಣಪ್ಪ, ಪ್ರಸನ್ನ, ಪ್ರಕಾಶ ನಾಯ್ಕ, ಸವಿತಾ, ಪಿಸಿ ವಿಶ್ವನಾಥ ಇದ್ದರು.