ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜಮೀನು ಸರ್ವೆ ವಿಚಾರ ದಲ್ಲಿ ಗಲಾಟೆಯಾಗಿ ವ್ಯಕ್ತಿಯನ್ನ ಬೈದು ಜಾತಿ ನಿಂದನೆ ಮಡಿ ಹಲ್ಲೆ ನಡೆಸಿದ ಐವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿ:03/06/2020 ರಂದು ಪರ‍್ಯಾದಿದಾರ ರಾದ ಆರ್ಮುಗಂ (55) ತಾಲ್ಲೂಕಿನ ಸುಣ್ಣದಹಳ್ಳಿ ಗ್ರಾಮದ ತಮ್ಮ ಜಾಗ ದಲ್ಲಿ ಸರ್ವೇ ಮಾಡಿಸುತ್ತಿದ್ದಾಗ, ಆರೋಪಿತರಾದ ಎ1 ಜಗದೀಶ್ ಬಿನ್ ಮಂಜುನಾಥ್, 30 ವರ್ಷ, ಎ2 ಕಾಂತರಾಜ್ ಬಿನ್ ಮಂಜುನಾಥ್, 32 ವರ್ಷ, ಎ3 ನಾಗೇಶ್ ಬಿನ್ ಮಂಜುನಾಥ್, 30 ವರ್ಷ, ಎ4 ಮಂಜುನಾಥ್ ಬಿನ್ ಗಜಗುಂಡೇ ಗೌಡ್ರು, 60 ವರ್ಷ, ಎ5 ಪ್ರೇಮಾ ಕೋಂ ಮಂಜುನಾಥ್, 58 ವರ್ಷ ರವರು ಸೇರಿಕೊಂಡು ಆರ್ಮುಗಂ ರವರಿಗೆ ಇದು ನಮಗೆ ಸೇರಿದ ಜಾಗ ಇಲ್ಲಿ ಯಾಕೆ ಸರ್ವೇ ಮಾಡಿಸುತ್ತೀರಾ ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ, ಜಗದೀಶನು ಅಲ್ಲೆ ಬಿದ್ದಿದ್ದ ಅರ್ಧ ಗಾತ್ರದ ಇಟ್ಟಿಗೆ ತುಂಡಿ ನಿಂದ ಪರ‍್ಯಾದಿದಾರರ ತಲೆಯ ಎಡಭಾಗಕ್ಕೆ ಹಾಗೂ ಕಾಂತರಾಜ್ ಈತನು ರೀಪೀಸ್ ನಿಂದ ಪಿರ‍್ಯಾದಿ ದಾರರ ಬಲಪಾದದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಪಿರ‍್ಯಾದಿದಾರರ ಜಾಗವನ್ನು ಸರ್ವೇ ಮಾಡಿಸಲು ಬಿಡದೇ ಅಡ್ಡಿ ಪಡಿಸಿ, ಜಾತಿನಿಂದನೆ ಮಾಡಿ, ಅವಾಚ್ಯವಾಗಿ ಬೈದು ಸಾಮಾನ್ಯ ಸ್ವರೂಪದ ಗಾಯ ಉಂಟು ಮಾಡಿದ ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆ ಗುನ್ನೆ ನಂ:77/2020 ಕಲಂ:323, 324,143,144,146,147,148,149,504 ಐಪಿಸಿ, ಹಾಗೂ 3(1)(r)(s)(2)(va) SC/St Act ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿ ಗಳಾದ ಡಿವೈಎಸ್ಪಿ ಸುಧಾಕರ್ ಎಸ್ ನಾಯ್ಕ್ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾ ಲಯಕ್ಕೆ ಆರೋಪಿತರ ವಿರುದ್ಧ ದೋಷಾ ರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾದ ರತ್ನಮ್ಮ ಪಿ.ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶ ರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:10-03-2026 ರಂದು ಎ1 ರಿಂದ ಎ5 ಆರೋಪಿತರಿಗೆ 2 ವರ್ಷ ಕಠಿಣ ಕಾರಾವಾಸ ಮತ್ತು 1,90,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.