ಭದ್ರಾವತಿ-ನಾಮಿನೆಟೆಡ್ ಕೌನ್ಸಿಲರ್ ಗಳಾಗಿ ಎ.ವಿಲ್ಸನ್ ಬಾಬು, ಎಂ.ಜಿ ರಾಮಚಂದ್ರ ನೇಮಕ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಉಳಿದ ಅವಧಿಗೆ ನಗರಸಭೆ ನೂತನ ನಾಮನಿರ್ದೇಶಿತ ಸದಸ್ಯರಾಗಿ ಎ.ವಿಲ್ಸನ್ ಬಾಬು ಹಾಗೂ ಎಂ.ಜಿ ರಾಮಚಂದ್ರ ನೇಮಕಗೊಂಡಿದ್ದಾರೆ. 

ನಗರಸಭೆಗೆ ಎ.ವಿಲ್ಸನ್ ಬಾಬು ಮತ್ತು ಎಂ.ಜಿ ರಾಮಚಂದ್ರ ಸೇರಿದಂತೆ ಒಟ್ಟು 5 ಜನರನ್ನು ನಾಮನಿರ್ದೇಶನ ಗೊಳಿಸ ಲಾಗಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಅಧಿಸೂಚನೆ ಹೊರಡಿಸಿದ್ದಾರೆ. 

ಸದಸ್ಯರಾಗಿ ನೇಮಕೊಳ್ಳಲು ಕಾರಣ ಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ಪಂಚಗ್ಯಾರಂಟಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ನೂತನ ನಾಮನಿರ್ದೇಶಿತ ಸದಸ್ಯರಾದ ವಿಲ್ಸನ್ ಬಾಬು ಮತ್ತು ರಾಮಚಂದ್ರ ಅವರಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಾನ್ಸಿಸ್, ಕಾಂಗ್ರೆಸ್ ಮುಖಂಡರಾದ ದಾಸ್, ಆನಂದ, ಜಾನ್ಸನ್, ಅಪ್ಪು, ಬ್ಲೆಸ್ಸಿಂಗ್. ಜಿ,ಸುಬ್ರಮಣಿ, ಪ್ರದೀಪ್, ಬಾಬು, ಚಂದ್ರು, ಮುರುಳಿ, ಬಿಪಿಎಲ್ ಸಂಘದ ಅಧ್ಯಕ್ಷ ಸಂಪತ್‌ಕುಮಾರ್, ಅಭಿ ಇನ್ನಿತರರು ಅಭಿನಂದಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು