ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದಲ್ಲಿ ಪವಿತ್ರ ರಂಜಾನ್ (ಈದ್-ಉಲ್-ಫಿತರ್) ಹಬ್ಬವನ್ನು ಮುಸ್ಲಿಂ ಸಮುದಾಯ ಸಂಭ್ರಮದಿಂದ ತರೀಕೆರೆ ರಸ್ತೆಯ ಈದ್ಗ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಶನಿವಾರ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್ ಸಲ್ಲಿಸಿದರು.
ಸೌಹಾರ್ದತೆ:ಹಬ್ಬದ ಅಂಗವಾಗಿ ಹಿಂದೂ- ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಜಕಾತ್ ಮತ್ತು ದಾನ: ರಂಜಾನ್ ಉಪವಾಸದ ಅಂತ್ಯದಲ್ಲಿ ಬಡವರಿಗೆ ಧನಸಹಾಯ ಹಾಗೂ ಆಹಾರ ಧಾನ್ಯಗಳನ್ನು 'ಜಕಾತ್' ರೂಪದಲ್ಲಿ ವಿತರಿಸುವ ಧಾರ್ಮಿಕ ಕಾರ್ಯಗಳು ನಗರದಾದ್ಯಂತ ನಡೆಯಿತು.
ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್, ಪಂಚ ಯೋಜನೆ ಅಧ್ಯಕ್ಷ ಬಿ.ಎಸ್. ಗಣೇಶ್ ಮಾಜಿ ಉಪ ಮೇಯರ್ ಮಹಮ್ಮದ್ ಸನಾಮಲ್ಲಾ, ಅಂಜುಮನ್ ಸಂಸ್ಥೆ ಅಧ್ಯಕ್ಷ ಆಯುಬ್ ಖಾನ್,ಉಪಾಧ್ಯಕ್ಷ ದಿಲ್ದಾರ್, ಕಾರ್ಯದರ್ಶಿ ಫಾರೂಕ್ ಅಹಮದ್, ಮುಖಂಡರಾದ ಫೀರ್ ಶರೀಫ್, ಅಬ್ದುಲ್ ಖದೀರ್, ಟಿಪ್ಪುಸಮಿತಿ ಅಧ್ಯಕ್ಷ ಮಹಬೂಬ್ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.