ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ SAIL-VISL ಇಸ್ಪಾತ್ ಮಹಿಳಾ ಸಮಾಜದ ಪದಾಧಿಕಾರಿಗಳು ಮತ್ತು ಸದಸ್ಯರು ಗಳಿಂದ ಭಾನುವಾರ ಇಸ್ಪಾ ತ್ ಮಹಿಳಾ ಸಮಾಜ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ವಿಐಎಸ್‌ಎಲ್ ಕಾರ್ಯಪಾಲಕ ನಿದೇರ್ಶಕ ಅನೂಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಮುಖ್ಯ ಮಹಾಪ್ರಬಂಧಕ ಬಿ.ವಿಶ್ವನಾಥ, ಮಹಾಪ್ರಬಂಧಕರು ಪ್ರಭಾರಿ (ಸ್ಥಾವರ), ಟಿ. ರವಿಚಂದ್ರನ್, ಇಸ್ಟಾತ್ ಮಹಿಳಾ ಸಮಾಜದ ಪದಾಧಿಕಾರಿ ಗಳಾದ ಅಧ್ಯಕ್ಷರಾದ ನಿಶಾ ಶ್ರೀವಾಸ್ತವ, ಉಪಾಧ್ಯಕ್ಷರಾದ ಪಂಕಜ ವಿಶ್ವನಾಥ, ಕಾರ್ಯದರ್ಶಿ ಈಶ್ವರಿ ಕುತಲನಾಥನ್, ಖಜಾಂಚಿ ವಿನೋದ ಇಳಯರಾಜ, ಸಾಂಸ್ಕೃತಿಕ ಕಾರ್ಯದರ್ಶಿ, ಪ್ರತಿಭಾ ರಘುನಾಥ್, ಜಂಟಿ ಕಾರ್ಯದರ್ಶಿ ಶ್ರವಂತಿ ಅನೀಲ್ ರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸ ಲಾಯಿತು. ವಿಐಎಸ್‌ಎಲ್‌ನ ಎಲ್ಲಾ ಮಹಿಳಾ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.