ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆ ವತಿಯಿಂದ ಸಂಗೀತ ಆಸಕ್ತರಿಗಾಗಿ ಎರಡು ದಿನಗಳ ಕಾಲ 'ಸುಗಮ ಸಂಗೀತ ತರಬೇತಿ ಶಿಬಿರ' ವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಹಳೇನಗರದ ಬಸವೇಶ್ವರ ಸರ್ಕಲ್ ಬಳಿಯ ಮಹಿಳಾ ಸೇವಾ ಸಮಾಜ ದಲ್ಲಿ ಏ: 2 ಮತ್ತು 3 ರಂದು ಈ ಶಿಬಿರವು ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ತರಬೇತಿ ನೀಡಲಾಗುತ್ತದೆ.
ಶಿಬಿರದ ಸಾರಥ್ಯವನ್ನು ಶಿವಮೊಗ್ಗದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರು ಹಾಗೂ ಸಂಗೀತ ಸಂಯೋಜಕ ಪ್ರಹ್ಲಾದ್ ದೀಕ್ಷಿತ್ ಅವರು ವಹಿಸಲಿದ್ದಾರೆ.
ಕಲಿಯುವ ಆಸಕ್ತಿ ಇರುವ ಯಾವುದೇ ವಯಸ್ಸಿನವರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರಾರ್ಥಿ ಗಳಿಗೆ ಕೇವಲ 200 ರೂಪಾಯಿ ಪ್ರವೇಶಾತಿ ಶುಲ್ಕ ನಿಗದಿಪಡಿಸ ಲಾಗಿದ್ದು, ಶಿಬಿರದ ಎರಡೂ ದಿನ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ.
ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ವರು ಏ:2 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ವೇದಿಕೆಯ ಅಧ್ಯಕ್ಷ ಅಡವೀಶಯ್ಯ. ಎಸ್,(94483 87247) ಅಥವಾ ಕಾರ್ಯದರ್ಶಿ ಜ್ಯೋತಿ ರಾಜಶೇಖರ್ (94816 55194) ಶೋಭ ಗಂಗರಾಜು (9449942932) ಲೋಲಾಕ್ಷಿ, ಎಂ (9741067385) ಶಿಲ್ಪ ಟಿ, ವಿ (9164242414) ಎಚ್, ಎನ್ ದಯಾನಂದ ಮೂರ್ತಿ (9739145060) ಅವರನ್ನು ಸಂಪರ್ಕಿಸಬಹುದಾಗಿದೆ.
ವರದಿ :-ಭಾರ್ಗವಿ, ಜಿ, ಆರ್