ಭದ್ರಾವತಿ-ನಾಳೆ ಸಂಜೆವರೆಗೂ ಕರೆಂಟ್ ಇರಲ್ಲ.?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ/ಗ್ರಾಮೀಣ ಉಪವಿಭಾಗಗಳ ಭದ್ರಾವತಿಯ ಶಾಖಾ ವ್ಯಾಪ್ತಿಗಳಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ಏ :07 ರ ನಾಳೆ ಮಂಗಳವಾರ ಈ ಕೆಳಕಾಣಿಸಿ ರುವ ಪ್ರದೇಶಗಳಲ್ಲಿ ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆ ಯವರೆಗೆ ವಿದ್ಯುತ್ ವ್ಯತ್ಯಯ ಉಂಟಾ ಗಲಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವಿದ್ಯುತ್ ನಿಲುಗಡೆಯಾಗಲಿರುವ ಪ್ರದೇಶಗಳು:

ನ್ಯೂಟೌನ್, ನ್ಯೂ ಕಾಲೋನಿ, ವಿದ್ಯಾ ಮಂದಿರ, ಆಂಜನೇಯ ಅಗ್ರಹಾರ ಆಕಾಶವಾಣಿ, ಕಾಗದನಗರ, ಸುರಗಿ ತೋಪು, ಆನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ. ಹೊಸಸಿದ್ದಾಪುರ, ಸಂಪಿಗೆ ಶೆಟ್ಟಿ ಸರ್.ಎಂ.ವಿ.ಬಡಾವಣೆ, ಎನ್.ಟಿ.ಬಿ. ಬಡಾವಣಿ, ಹಳೇಸಿದ್ದಾ ಪುರ, ಹೊಸೂರು, ತಾಂಡ್ಯ, ಸಂಕ್ಲಿಪುರ, ಹುತ್ತಾ ಕಾಲೋನಿ ಐಟಿಐ, ಜನ್ನಾಪುರ, ಬಿ.ಹೆಚ್.ರಸ್ತೆ, ಅಪ್ಪರ್‌ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಬೊಮ್ಮನಕಟ್ಟೆ, 

ಹಿರಿಯೂರು. ನಂಜಾಪುರ, ಹಳೇ ಹಿರಿಯೂರು, ಗೊಂದಿ ಹಾಕ್ ವೆಲ್, ಬಿಳಿಕಲ್ ಮೈನ್ಸ್, ಹುಣಸೆ ಕಟ್ಟೆ, ಹೊನ್ನಹಟ್ಟಿ ಹೊಸೂರು, ಕಂಬದಾಳ್ ಹೊಸೂರು, ಅರಳೀಕೊಪ್ಪ, ಗೊಂದಿ ಕೈಮರ, ಕುವೆಂಪು ನಗರ, ಕಲ್ಲಹಳ್ಳಿ, ಕಲ್ಲಹಳ್ಳಿ ತಾಂಡ, ಸಂಕಲೀಪುರ, ಸೋಮಿನಕೊಪ್ಪ, ರಾಮನಕೊಪ್ಪ, ಹಾಗಲಮನೆ, ಸಿರಿಯೂರು, ಸಿರಿಯೂರು ತಾಂಡ, ವೀರಾಪುರ, ಇತ್ಯಾದಿ ಭಾಗಗಳಲ್ಲಿ ಅಡಚಣೆ ಯಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು