ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಳೆದ 2020ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕ ನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರು ಮಂದಿ ಆರೋಪಿ ಗಳಿಗೆ ಭದ್ರಾವತಿಯ ನ್ಯಾಯಾಲ ಯವು ಕಠಿಣ ಕಾರಾವಾಸ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಕೋರ್ಟ್ ಪ್ರಕರಣದ ಹಿನ್ನೆಲೆ:
2020ರ ಮೇ 10ರಂದು ತಾಲ್ಲೂಕಿನ ಜಿಂಕಲೈನ್ ವೀರಾಪುರ ರಸ್ತೆಯ ತೆಂಗಿನ ತೋಟವೊಂದರಲ್ಲಿ ಮಂಜುನಾಥ್ ಎಂಬ ಯುವಕನ ಮೇಲೆ ಅಜೇಯ ಅಲಿಯಾಸ್ ಅಜ್ಜಿ, ತೇಜು, ಮನು, ಆದರ್ಶ, ಅರುಣ ಮತ್ತು ಪಾನಿಪುರಿ ರಂಗ ಎಂಬುವವರು ಗುಂಪು ಕಟ್ಟಿಕೊಂಡು ದಾಳಿ ನಡೆಸಿ ದ್ದರು. ಹಳೆಯ ವೈಷಮ್ಯ ಮನಸ್ಸಿ ನಲ್ಲಿಟ್ಟುಕೊಂಡಿದ್ದ ಈ ತಂಡವು, ಮಂಜುನಾಥ್ ಅವರನ್ನು ಹಿಡಿದು ಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿತ್ತು. ಈ ಭೀಕರ ಹಲ್ಲೆಯಿಂದ ಮಂಜುನಾಥ್ ಅವರ ಕೈ ಹಾಗೂ ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.
ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಎ.ಎಸ್.ಐ ಕುಬೇರಪ್ಪ ತನಿಖೆ ನಡೆಸಿ ನ್ಯಾಯಾಲ ಯಕ್ಕೆ ದೋಷಾ ರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿದರು.
ಮೇ 04, 2026ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯವು, ಮುಖ್ಯ ಆರೋಪಿ ಅಜೇಯನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಉಳಿದ ಐವರು ಆರೋಪಿಗಳಿಗೆ 3 ವರ್ಷಗಳ ಕಠಿಣ ಕಾರಾವಾಸ ವಿಧಿಸಿದೆ.
ಶಿಕ್ಷೆಯ ಜೊತೆಗೆ ಎಲ್ಲಾ ಆರೋಪಿ ಗಳಿಗೆ ಒಟ್ಟು 2,30,000 ರೂಪಾಯಿ ಗಳ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ 1,50,000 ರೂಪಾಯಿ ಗಳನ್ನು ಹಲ್ಲೆಗೊಳಗಾದ ಸಂತ್ರಸ್ತ ಮಂಜುನಾಥ್ ಅವರಿಗೆ ಪರಿಹಾರ ವಾಗಿ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.