ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಮಾಜದ ಸ್ವಚ್ಚತೆಯ ಜೊತೆಗೆ ಆರೋಗ್ಯವನ್ನು ಕಾಪಾಡುವ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು ಎಂದು ಮಧು ಲ್ಯಾಬ್ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಆರ್. ಜಗದೀಶ್ ಹೇಳಿದರು.
ಅವರು ಸೋಮವಾರ ಹಳೇನಗರದ ಮಧು ಲ್ಯಾಬೋರೇಟರಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ 'ವಿಶ್ವ ಕಾರ್ಮಿಕರ ದಿನಾಚರಣೆ' ಪೌರ ಕಾರ್ಮಿಕ ರನ್ನು ಸನ್ಮಾನಿಸಿ ಮಾತನಾಡುತ್ತಾ, ಜಗತ್ತು ಸುಖ ನಿದ್ರೆಯಲ್ಲಿದ್ದಾಗ ಎದ್ದು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದ ನೀಯ. ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಒತ್ತು ನೀಡ ಬೇಕು.ದುಶ್ಚಟಗಳಿಗೆ ಬಲಿಯಾಗ ಬಾರದೆಂದರು.
ಸಮಾಜ ಕೂಡ ಎಲ್ಲಾ ಕಾರ್ಮಿಕ ರನ್ನು ಗೌರವದಿಂದ ಕಾಣಬೇಕು.ಅವರ ಕಾನೂನು ಬದ್ದ ಬೇಡಿಕೆಗೆ ಆಧ್ಯತೆ ನೀಡಬೇಕು ಎಂದರು.
ಈ ಬಾರಿ ನಗರದ ರಂಗಪ್ಪ ಸರ್ಕಲ್ ಮತ್ತು ಕೇಶವಪುರ ಬಡಾವಣೆಯಲ್ಲಿ ಕಾರ್ಯ ನಿರ್ವಹಿಸುವ ಆರು ಜನ ಪೌರ ಕಾರ್ಮಿಕರಾದ ಶರವಣ.ಎಸ್, ಲಿಂಗಮ್ಮ, ತಿರುಮಲ, ಲಕ್ಷ್ಮಮ್ಮ, ಲತೇಶ್, ತುಳಸಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲೀಲಾವತಿ ಜಗದೀಶ್, ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಂಧೂ, ನಯನಾ ಉಪಸ್ಥಿತರಿದ್ದರು.