ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಭಾರತದ ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರು ಒಬ್ಬ ಮಹಾನ್ ಮಾನವತಾವಾದಿ ಯಾಗಿ ದ್ದರು ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಹೇಳಿದರು.
ಅವರು ಶನಿವಾರ ವಕೀಲರ ಸಂಘ ದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಧಾರ್ಮಿಕ,ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಎಲ್ಲ ಸ್ಥರಗಳಲ್ಲಿ ಅಂಬೇಡ್ಕರ್ ಚಿಂತನೆ ನಡೆಸಿ ಸರ್ವಜನರ ಹಿತ ಕಾಯುವ ಸಮಾನತೆಯನ್ನು ರೂಪಿಸುವ ನಿಟ್ಟಿನಲ್ಲಿ ಅವರು ಭಾರತದ ಸಂವಿಧಾನವನ್ನು ರಚಿಸಿದರು. ಅವರು ರಚಿಸಿದ ಸಂವಿಧಾನದ ತಳಹದಿಯ ಮೇಲೆಯೇ ಭಾರತದ ಎಲ್ಲಾಕಾನೂನುಗಳು ನಿರ್ಮಾಣವಾಗಿವೆ. ಭಾರತದ ಜನತೆಯ ನಡುವ ಸಮಾರಸ್ಯ ತೆಯನ್ನು ರೂಪಿಸಿ ಸಮಾನತೆಯಿಂದ ಸಹಬಾಳ್ವೆನಡೆಸಲು ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರಿಗೂ ದಾರಿದೀಪವಾಗಿದೆ ಎಂದರು.
ವಕೀಲರಸಂಘದ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಅದ್ಭುತ ಶಕ್ತಿಯಾಗಿ ಎಲ್ಲರಂಗ ಗಳಲ್ಲಿಯೂ ಅಪಾರವಾದ ಮತ್ತು ಆಳವಾದ ಪಾಂಡಿತ್ಯ ವನ್ನು ಹೊಂದಿದ್ದರು, ಅವರು ಮಾಡಿರುವ ಒಂದೊಂದು ಕೆಲಸವೂ ಸಹ ಅದ್ಭುತವಾದ ಅನುಭವವನ್ನು ನಮಗೆ ನೀಡುತ್ತದೆ ಎಂದ ಅವರು ಅಂಬೇಡ್ಕರ್ ಅವರು ಮಾಡಿದ ಅನೇಕ ಸಾಮಾಜಿಕ ಕಳಕಳಿಯ ಕಾರ್ಯ ಗಳನ್ನು ಉದಾಹರಣೆ ಸಹಿತವಾಗಿ ವಿವರಿಸಿದರು.
ಅಂಬೇಡ್ಕರ್ ಕುರಿತಂತೆ ನ್ಯಾಯವಾದಿ ಚಂದ್ರೇಗೌಡ, ವೆಂಕಟಗಿರಿಯವರು ಮಾತನಾಡಿದರು.
ವೇದಿಕೆಯಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ, ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್, 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ನಾಸೀರಾಭಾನು, 4ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಗಿರಿಜಾ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಕೇಶವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ರಾಜು ಸ್ವಾಗತಿಸಿ, ವರಲಕ್ಷ್ಮೀ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗಳು ಭಾಗವಹಿಸಿದ್ದರು.
Tags
ಭದ್ರಾವತಿ ವಕೀಲರ ಸಂಘ