ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ರೈತರ ಜಮೀನುಗಳನ್ನು ಸರ್ವೆ ಮಾಡದೆ ನಿರ್ಲಕ್ಷ್ಯವಹಿಸು ತ್ತಿರುವ ಖಾಸಗೀ ಸರ್ವೆಯರ್ ರವರ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಹಾಗೂ ತಾಲ್ಲೂಕು ಕಛೇರಿಯಲ್ಲಿ ಪದೇ ಪದೇ ಲಿಫ್ಟ್ ಹಾಳಾಗುತ್ತಿರುವುದನ್ನು ಖಂಡಿಸಿ ಮೇ: 12 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್ ಕಛೇರಿಯ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿ ಸಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕೆಲ ತಿಂಗಳು ಗಳಿಂದ ಖಾಸಗಿ ಸರ್ವೆಯರ್ ಗಳು ತಮ್ಮ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಕೋರಿ ಕೆಲಸಕ್ಕೆ ಹಾಜರಾ ಗದೆ ಯಾವುದೇ ಜಮೀನನ್ನು ಸರ್ವೆ ಮಾಡದೆ ರೈತರಿಗೆ ಮತ್ತು ಸಾರ್ವಜನಿ ಕರಿಗೆ ತೊಂದರೆ ಆಗುತ್ತಿದ್ದು ಇದರಿಂ ದಾಗಿ ಸರ್ವೆ ಮಾಡಿಕೊಡಲು ಕೋರಿ ಅರ್ಜಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು ಸರ್ಕಾರ ಕೂಡಲೇ ಇವರುಗಳ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವೇ ತಿಂಗಳು ಗಟ್ಟಲೆ ಕೆಲಸಕ್ಕೆ ಹಾಜರಾಗದ ಸರ್ವೆ ಮಾಡದೆ ಇರುವ ಖಾಸಗೀ ಸರ್ವೆಯರ್ ರವರನ್ನು ಕೆಲಸದಿಂದ ವಜಾ ಮಾಡಬೇಕಾಗಿ ಆಗ್ರಹಿಸುತ್ತೇವೆ.
ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ರವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ತಂದಿರುವುದು ಸ್ವಾಗತಾರ್ಹವಾಗಿರುತ್ತದೆ. ಆದರೆ ಸರ್ವೆ ಇಲಾಖೆಯಲ್ಲಿ ಇರುವ ಭ್ರಷ್ಟಾಚಾರ ಮತ್ತು ನಿರ್ಲಕ್ಷದ ಬಗ್ಗೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿರುವುದು ಅತ್ಯಾವಶ್ಯಕ ವಾಗಿದೆ. ಖಾಸಗೀ ಸರ್ವೆಯರ್ ರವರು ತಕ್ಷಣ ಕೆಲಸಕ್ಕೆ ಹಾಜರಾಗದಿದ್ದರೆ ಅನೇಕ ವಿದ್ಯಾವಂತ ಬಡ ಸರ್ವೆಯ ರನ್ನು ತಕ್ಷಣ ಆಯ್ಕೆ ಮಾಡಿಕೊಂಡು ಬಡ ರೈತರ ಜಮೀನುಗಳ ಸರ್ವೆ ಕೆಲಸಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಸಹಾಯ ಮಾಡುವುದು ಸರ್ಕಾರದ ಮುಖ್ಯ ಕೆಲಸವಾಗಿರುತ್ತದೆ.
ಈ ಬಗ್ಗೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಜಮೀನಿನ ರೈತರೊಂದಿಗೆ ದಿನಾಂಕ ಮೇ 12ರಂದು ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್ ಕಛೇರಿಯ ಮುಂಭಾಗ ಸರ್ಕಾರದ ವಿರುದ್ಧ ಹಾಗೂ ನಡೆಸಲು ತೀರ್ಮಾನಿ ಸಲಾಗಿದೆ. ಸರ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಕ್ತರು ಹಾಗೂ ಸರ್ವೆ ಇಲಾಖೆಯ ಅಧಿಕಾರಿ ಗಳ ವಿರುದ್ಧ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು
ತಾಲ್ಲೂಕು ಕಛೇರಿಯಲ್ಲಿ ಹಲವು ತಿಂಗಳುಗಳಿಂದ ಲಿಫ್ಟ್ ಹಾಳಾಗಿದ್ದು ಸದರಿ ಲಿಫ್ಟ್ ನ್ನು ಸರಿಪಡಿಸದೇ ಬೇಜವಾಬ್ದಾರಿ ತೋರುತ್ತಿದ್ದು ಈ ಲಿಫ್ಟ್ ಇಲ್ಲದೇ ಕಚೇರಿಯ ಸಿಬ್ಬಂಧಿಗಳು, ಸಾರ್ವಜನಿಕರು ವೃದ್ಧರು, ಮಹಡಿ ಯಿಂದ ಮಹಡಿಗೆ ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗೂ ಸದರಿ ಲಿಫ್ಟ್ ಹಾಳಾದಾಗ ಸಮಯಕ್ಕೆ ಸರಿಯಾಗಿ ದುರಸ್ತಿಯನ್ನು ಸರಿಪಡಿಸದೇ ಆಗಾಗ ಲಿಫ್ಟ್ ಹಾಳಾಗುತ್ತಿರುತ್ತದೆ. ಇದರಿಂದ ಸಾರ್ವಜನಿರು ನಿರಂತರವಾಗಿ ತೊಂದರೆ ಅನುಭವಿಸುವಂತಾಗಿ ರುತ್ತದೆ ಆದ್ದರಿಂದ ಕೂಡಲೇ ಲಿಮ್ಮನ್ನು ಸರಿವಡಿಸಲು ಒತ್ತಾಯಿಸಿ ಭದ್ರಾವತಿ ತಾಲ್ಲೂಕು ಕಛೇರಿಯ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿ.ಎನ್.ರಾಜು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಬ್ರಹ್ಮಲಿಂಗಯ್ಯ ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಪ್ರಧಾನ ಸಂಚಾಲಕ ಬಸವರಾಜ್, ಕಾರ್ಯದರ್ಶಿಗಳಾದ ರಾಜು ಸ್ವಾಮಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.