ಭದ್ರಾವತಿ-ಜಿಂಕೆ ಬೇಟೆಯಾಡುತ್ತಿದ್ದ ಗ್ಯಾಂಗ್ ಮೇಲೆ ದಾಳಿ ಓರ್ವ ಅರೆಸ್ಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅರಣ್ಯ ಪ್ರದೇಶದಲ್ಲಿ ಜಿಂಕೆ ಗಳನ್ನು ಬೇಟೆಯಾಡುತ್ತಿದ್ದ ಗ್ಯಾಂಗ್‌ ವೊಂದರ ಮೇಲೆ ಅರಣ್ಯ ಸಂಚಾರಿ ದಳ ಹಾಗೂ ವಲಯ ಅರಣ್ಯಾಧಿಕಾರಿ ಗಳ ತಂಡ ಜಂಟಿ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

     ಬಂಧಿತ ಆರೋಪಿಯನ್ನು ಚನ್ನಗಿರಿ ತಾಲೂಕಿನ ಮಲ್ಲಿಗೆರೆ ನಿವಾಸಿ ದಿವಾಕರ್ ಎಂದು ಗುರುತಿಸಲಾಗಿದೆ.

     ಮಾವಿನಕಟ್ಟೆ ಶಾಖೆಯ ಲಕ್ಷ್ಮೀಸಾಗರ ಕಿರು ಅರಣ್ಯ ಪ್ರದೇಶ ದಲ್ಲಿ ಬೇಟೆಗಾರರು ಜಿಂಕೆಗಳನ್ನು ಕೊಲ್ಲುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತ ರಾದ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ​2 ಜಿಂಕೆಗಳ ಕಳೇಬರ, ​1 ಕಾರು, ​3 ಬೈಕ್‌ಗಳನ್ನ‌ ವಶಪಡಿಸಿಕೊಂಡಿದ್ದಾರೆ.

      ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು