ಕೂಡ್ಲಿಗೆರೆ ಗ್ರಾಮದಲ್ಲಿ ನಾಯಿಗಳ ಮೇಲೆ ಚಿರತೆ ಅಟ್ಯಾಕ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ:ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಮತ್ತೊಮ್ಮೆ ಚಿರತೆ ಯೊಂದು ಪ್ರತ್ಯಕ್ಷ ವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಜಿ ನಿರ್ದೇಶಕಿ ಯೊಬ್ಬರ ತೋಟದ ಮನೆಗೆ ನುಗ್ಗಿ ಸಾಕು ನಾಯಿ ಯನ್ನು ಬಾಯಲ್ಲಿ ಕಚ್ಚಿಕೊಂಡು ಹೊತ್ತೊಯ್ದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. 

   ಚಿರತೆಯು ನಾಯಿಯನ್ನು ಬೇಟೆ ಯಾಡಿ ಹೊತ್ತೊಯ್ಯುತ್ತಿರುವ ಭಯಾನಕ ದೃಶ್ಯಾವಳಿಗಳು ತೋಟದ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆ ಯಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಕೂಡಿಗೆರೆ ಗ್ರಾಮದಲ್ಲಿರುವ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಅವರಿಗೆ ಸೇರಿದ ಟಿವಿಎನ್ ಫಾರಂನಲ್ಲಿ ಈ ಘಟನೆ ನಡೆದಿದೆ. ಸುಜಾತ ಅವರು ತಮ್ಮ ತೋಟದ ಮನೆಯಲ್ಲಿ ನಾಯಿ ಸಾಕಿದ್ರು, ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಸುಜಾತ ಅವರು ಸಾಕು ಪ್ರಾಣಿ ಗಳಿಗೆಲ್ಲ ಅನ್ನ ಹಾಗೂ ಹಾಲು ಹಾಕಿ ತಮ್ಮ ಕೆಲಸ ಮುಗಿಸಿ ತೆರಳಿದ್ದರು. 

    ಸೋಮವಾರ ಬೆಳಗ್ಗೆ ವಾಕಿಂಗ್‌ಗೆ ಎಂದು ಅವರು ಬಂದಾಗ, ತೋಟದಲ್ಲಿ ಕೇವಲ ಎರಡು ಮರಿ ನಾಯಿಗಳು ಮಾತ್ರ ಇರುವುದು ಕಂಡುಬಂದಿದೆ. ದೊಡ್ಡ ನಾಯಿ ಹಾಗೂ ಉಳಿದ ಮರಿಗಳು ನಾಪತ್ತೆಯಾಗಿರುವುದು ಅವರಲ್ಲಿ ತೀವ್ರ ಅನುಮಾನ ಮೂಡಿಸಿತ್ತು.

    ತಕ್ಷಣವೇ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ, ಭಾನುವಾರ ತಡರಾತ್ರಿ ಸುಮಾರು 2.03ರ ಹೊತ್ತಿಗೆ ತೋಟ ದೊಳಗೆ ನುಗ್ಗಿರುವ ಚಿರತೆಯೊಂದು, ನಾಯಿಯ ಮೇಲೆ ದಾಳಿ ಮಾಡಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕತ್ತಲಲ್ಲಿ ಮಾಯವಾಗಿರುವ ದೃಶ್ಯ ಕಂಡುಬಂದಿದೆ. ಇದೇ ತೋಟದಲ್ಲಿ ಸುಮಾರು ಆರು-ಏಳು ತಿಂಗಳ ಹಿಂದೆಯೂ ಸಹ ಇದೇ ಮಾದರಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಸಾಕು ನಾಯಿಯನ್ನು ಕೊಂದು ಹಾಕಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಚಿರತೆ ಕಾಣಿಸಿ ಕೊಂಡಿರುವುದು ಸ್ಥಳೀಯ ರನ್ನು ಬೆಚ್ಚಿ ಬೀಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು