ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಸದರಿ ಮೆರವಣಿಗೆ ಸಾಗುವ ಈ ಕೆಳಕಾಣಿಸಿ ರುವ ಪ್ರದೇಶಗಳಲ್ಲಿ ಆ:26 ರ ನಾಳೆ ಬುಧವಾರದಂದು ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆ ಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ:
ನಗರದ ಲೋಯರ್ ಹುತ್ತಾ, ಬಿ.ಹೆಚ್. ರಸ್ತೆ, ಕ.ರಾ.ರ.ಸಾ.ನಿ ಬಸ್ ನಿಲ್ದಾಣದ ರಸ್ತೆ, ಹಾಲಪ್ಪ ವೃತ್ತ, ಚಾಮೇಗೌಡ ಬೀದಿ, ರಂಗಪ್ಪ ವೃತ್ತ, ಹೊಳೆ ಹೊನ್ನೂರು ರಸ್ತೆ, ಟಿಪ್ಪು ವೃತ್ತ, ಚೆನ್ನಗಿರಿ ರಸ್ತೆ, ಮಾಧವಾಚಾರ್ ವೃತ್ತ, ತರೀಕೆರೆ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಚಣೆಯಾಗಲಿದ್ದು, ಗ್ರಾಹಕರು ಸಹಕರಿಸಲು ಮೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕೋರಿದ್ದಾರೆ.