ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಮಿಲ್ಟ್ರಿ ಕ್ಯಾಂಪ್ ಪೊಲೀಸ್ ವಸತಿ ಸಮುಚ್ಚಯದಲ್ಲಿ ನಿರ್ಮಿಸಲಾಗಿರುವ ನೂತನ ಕವಾಯತು ಮೈದಾನ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಬಿ.ಆರ್.ರವಿ ಕಾಂತೆಗೌಡ ಉದ್ಘಾಟಿಸಿದರು.
ಈ ಹಿಂದೆ ಡಿಎಆರ್ ಮೈದಾನದಲ್ಲಿ ಕವಾಯತು ಮೈದಾನ ನಿರ್ಮಿಸ ಲಾಗಿತ್ತು. ಪ್ರಸ್ತುತ ಈ ಕವಾಯತು ಆರ್‌ಎಎಫ್ ಅಧೀನಕ್ಕೆ ಸೇರ್ಪಡೆ ಗೊಂಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕವಾಯತು ನಡೆಸಲು ಸೂಕ್ತ ಮೈದಾನವಿರಲಿಲ್ಲ. ಪೊಲೀಸ್ ಸಿಬ್ಬಂದಿಗಳು ಬೇರೆ ಬೇರೆ ಕಡೆ ಕವಾಯತು ನಡೆಸುತ್ತಿದ್ದಾರೆ. ಇಲಾಖೆಗೆ ಪ್ರತ್ಯೇಕ ಕವಾಯತು ಮೈದಾನದ ಅವಶ್ಯಕತೆ ಇತ್ತು.
ಈ ಹಿನ್ನಲೆಯಲ್ಲಿ ಸೂಕ್ತ ಸ್ಥಳ ಗುರುತಿಸಿ ನೂತನ ಕವಾಯತು ಮೈದಾನ ನಿರ್ಮಿಸಲಾಗಿದೆ.
ಎಸ್ ಪಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಎ.ಜಿ.ಕಾರಿಯಪ್ಪ, ಡಿವೈಎಸ್ ಪಿ ಪ್ರಕಾಶ ರಾಠೋಡ್ ಹಾಗು ಉಪ-ವಿಭಾಗದ ಅಧಿಕಾರಿ ಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.