ಭದ್ರಾವತಿ-ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೆ ನಗರದ ಗಾಂಧಿನಗರ ದಲ್ಲಿರುವ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಸನ್ನಿಧಿಯಲ್ಲಿ ಸೆ : 8 ರಂದು ಮಹೋತ್ಸವದ ಧೈಯ ವಾಕ್ಯ ವೇಳಾಂಗಣಿ ಮಾತೆ ಅಂಚಿನಲ್ಲಿ ರುವವರಿಗೆ ಭರವಸೆ ಘನತೆ ಹಾಗೂ ಕ್ರಿಸ್ತನ ಪ್ರೀತಿಯ ಪ್ರತಿಬಿಂಬ' ಎಂಬ ದೇಯ್ಯ ವಾಕ್ಯ ದೊಂದಿಗೆ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ- 2026 ರ ಕಾರ್ಯಕ್ರಮ ನೆರವೇರಲಿದೆ ಎಂದು ಹಳೆ ನಗರ ಗಾಂಧಿನಗರದ ವೇಳಾಂಗಣ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಫಾದ‌ರ್ ಸ್ಟಿವನ್ ಡೆಸ್ ರವರು ತಿಳಿಸಿದರು. 

   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೇಳಾಂಗಣಿ ಮಾತೆ ಅಂಚಿ ನಲ್ಲಿರುವವರಿಗೆ ಭರವಸೆ ಘನತೆ ಮತ್ತು ಕ್ರಿಸ್ತನ ಪ್ರೀತಿಯ ಪ್ರತಿಬಿಂಬ ಕುರಿತಂತೆ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಆ. 29ರ ಶನಿವಾರ ದಿಂದ ಸೆ: 8ರ ಮಂಗಳವಾರದವರೆಗೆ ಹಲವಾರು ಪೂಜಾ ಕಾರ್ಯಕ್ರಮಗಳು ನೆರವಿರಲಿವೆ. ಆ: 30ರ ಭಾನುವಾರ ದಂದು ಬೆಳಿಗ್ಗೆ 8.30 ರಿಂದ ಸಂಜೆ 4:30 ವರೆಗೆ ಪ್ರಭೋದಕರಾದ ಫಾದರ್ ರೋಮನ್ ಪಿಂಟು ರವರಿಂದ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ ನೆರವೇರಲಿದೆ. ಆ :31ರ ಸೋಮವಾರ ದಂದು ವಿಧವೆ, ವಿದುರರ ದಿನ ವೇಳಾಂಗಣಿ ಮಾತೆ ಸರ್ವರ ಘನತೆ ಯನ್ನು ಘೋಷಿಸುವ ತಾಯಿ ಎಂಬುದಾಗಿ ಕಾರ್ಯಕ್ರಮ ಹೀಗೆ ಹಲವು ವಿಚಾರಗಳ ದಿನವನ್ನಾಗಿ, ಸೆ: 3ರ ಗುರುವಾರ ವೇಳಾಂಗಣಿ ಮಾತೆ ಅಂಚಿನಲ್ಲಿ ರುವ ಹಿರಿಯರ ದಿನ ಕಾರ್ಯಕ್ರಮ ನಡೆಯಲಿದ್ದು ಸೆ: 7ರ ಸೋಮವಾರದಂದು ಬೆಳಿಗ್ಗೆ 8:30 ರಿಂದ ಸಂಜೆ 4:30ವರೆಗೆ ಪ್ರಭೋದಕ ರಾದ ಫಾದರ್ ರೋಮನ್ ಪಿಂಟೋ ರವರಿಂದ ಆದ್ಯಾತ್ಮಿಕ ನವೀಕರಣ ಧ್ಯಾನ ಕೂಟ ನೆರವೇರಲಿದೆ.ಅಂದು ಸಂಜೆ 5:00 ಗಂಟೆಗೆ ಜಪಸರ,ಬಲಿ-ಪೂಜೆ, ಪ್ರಬೋಧನೆ ಮತ್ತು ನವೇನ ನೆರವೇರಲಿದ್ದು ಸಂಜೆ 6-30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತೆಯ ಅಲಂಕೃತ ಮೆರವಣಿಗೆ ನೆರವೇರಲಿದೆ.

     ಮಾತೆಯ ಮಹೋತ್ಸವ ಸೆ: 8ರ ಮಂಗಳ ವಾರ ಬೆಳಿಗ್ಗೆ 7:00 ರಿಂದ 11:00ವರೆಗೆ ಸಿರೋ ಮಲಬಾರ್ ವಿಧಿ ಯಲ್ಲಿ ಹಲವು ಪೂಜೆಗಳು ನೆರವೇರ ಲಿದ್ದು ಮಧ್ಯಾಹ್ನ 12:30 ಕ್ಕೆ ಅನ್ನ ಸಂತರ್ಪಣೆ ಹಾಗೂ ಸಂಜೆ 5:30ಕ್ಕೆ ಮಹೋತ್ಸವದ ಸಾಮ್ರಾಮಿಕ ದಿವ್ಯ ಬಲಿ ಪೂಜೆ ಮುಂತಾದ ಕಾರ್ಯಕ್ರಮ ಗಳು ಶಿವಮೊಗ್ಗ- ಧರ್ಮಕ್ಷೇತ್ರದ ಪ್ರೇಷಿತ ಆಡಳಿತ ಅಧಿಕಾರಿ ಗಳಾದ ಪರಮ ಪೂಜ್ಯ ಡಾ.ಡುಮಿಂಗ್ ಡಯಾಸ್ ರವರ ಸನ್ನಿಧಿಯಲ್ಲಿ ನೆರವೇರಲಿದೆ ಎಂದರು.

      ಸುದ್ದಿಗೋಷ್ಠಿಯಲ್ಲಿ ವೇಳಾಂಗಣಿ ಆರೋಗ್ಯಮಾತೆ ಪುಣ್ಯಕ್ಷೇತ್ರದ ಪದಾಧಿಕಾರಿ ಗಳಾದ ಸಿಸ್ಟರ್ ವಿಲ್ಮಾ, ತೇರಿಸ ಮಸಾರಿ, ಜಾರ್ಜ್, ಆಂಟೋನಿ ವಿಲ್ಲನ್, ಜೆಸಿ, ಪೌಲ್ ಡಿಸೋಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು