ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇನಗರದ ಶ್ರೀವಾದಿ ರಾಜ ಸ್ವಾಮಿಗಳ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಮಠದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಠನ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ಪಷ್ಪ ಸಹಿತವಾಗಿ ತುಳಸಿ ಅರ್ಚನೆಯನ್ನು ಮಾಡಲಾಯಿತು.
ಶ್ರೀವೇಣುಗೋಪಾಲಕೃಷ್ಣನ ಮೂರುತಿ ಯನ್ನು ಪುಷ್ಪಾಲಂಕೃತ ತೊಟ್ಟಿಲೊಳಗಿರಿಸಿ ವಿವಿಧಪುಷ್ಪ ಹಾಗೂ ತುಳಸಿಮಾಲೆಯಿಂದ ಅಲಂಕಾರಮಾಡಿದ ನಂತರ ಗೋಪಾಲಾಚಾರ್ ಅವರು ವಿಧಿ ಪೂರ್ವಕವಾಗಿ ಭಕ್ತಾದಿಗಳಿಂದ ಸಾಮೂಹಿಕವಾಗಿ ಸಂಕಲ್ಪಮಾಡಿಸಿ ಹರಿವಾಯು ಗುರುಗಳಲ್ಲಿ ಪ್ರಾರ್ಥನಾ ಪೂರ್ವಕವಾಗಿ ಕೃಷ್ಣಾಷ್ಟೋತ್ತರ, ವಿಷ್ಣುಸಹಸ್ರನಾಮಾವಳಿ ಪಠಣ ದಿಂದಿಗೆ ತುಳಿಸಿ ಅರ್ಚನೆಯನ್ನು ಪುಷ್ಪಸಹಿತವಾಗಿ ಮಾಡಿದರು. ಇವರೊಂದಿಗೆ ಶ್ರೀಮಠದ ಅರ್ಚಕ ರಾದ ಸಮೀರಾಚಾರ್ ಅವರೂಸಹ ಅರ್ಚನೆಯಲ್ಲಿ ಪಾಲ್ಗೊಂಡು ಅರ್ಚನೆಮಾಡಿದರು.
ಅರ್ಚನೆಯ ನಂತರ ಮಹಾಮಂಗ ಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದವಿತರಣೆ ಮಾಡಲಾಯಿತು.
ಈಸಂಧರ್ಭದಲ್ಲಿ ಪಂಡಿತ ಶ್ರೀನಿವಾಸಾ ಚಾರ್, ಮಾಧುರಾವ್, ಗೋಪಾಲಕೃಷ್ಣ ರಾವ್, ಶ್ರೀಪಾದಾ ಚಾರ್, ಶ್ರೀಮಠದ ಅಧ್ಯಕ್ಷರಾದ ಮುರಳೀಧರ ತಂತ್ರಿ ಉಪಾಧ್ಯಕ್ಷರಾದ ಸುಮರಾಘವೇಂದ್ರ ತಂತ್ರಿ, ನಿರಂಜನ್, ರಮಾಕಾಂತ,ಪ್ರಶಾಂತ, ಶೇಷಗಿರಿ, ರಾಮಣ್ಣ,ಗಿರಿ,ಕೃಷ್ಣಮೂರ್ತಿ,ರಾಂಘವೇಂದ್ರ ತಂತ್ರಿ, ಸ್ವಾಮಿರಾವ್, ಮುಕುಂದ,ಶ್ರೀಷಾ,ಶ್ರೀಕಾಂತ್,ವಾಸುದೇವ್ ಸೇರಿದಂತೆ ಅನೇಕ ಮಹಿಳೆ ಯರು ಹಾಜರಿದ್ದು ವಿಷ್ಣು ಸಹಸ್ರ ನಾಮಾವಳಿಯನ್ನು ಪಠಿಸಿದರು.