ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜೆ.ಎಚ್.ಪಟೇಲ್ ಅಭಿಮಾನಿ ಬಳಗ ತಾಲೂಕು ವತಿಯಿಂದ ನಗರದ ನ್ಯೂಟೌನ್ ಮೇಸ್ ರಸ್ತೆಯ ಸುರಕ್ಷಾ ಜೀವನ ಸೇವಾ ಟ್ರಸ್ಟ್ ನಲ್ಲಿ ಗುರುವಾರ ಬೆಳಗ್ಗೆ 11:30ಕ್ಕೆ, ಮಾಜಿ ಮುಖ್ಯಮಂತ್ರಿ ಧೀಮಂತ ನಾಯಕ ಸಮಾಜವಾದದ ಹರಿಕಾರ ಜೆ.ಹೆಚ್.ಪಟೇಲ್ ರವರ 96ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಮುಖ್ಯಸ್ಥ ಶಶಿಕುಮಾರ್ ಎಸ್ ಗೌಡ ತಿಳಿಸಿದ್ದಾರೆ.
ಉದ್ಯಮಿ ಬಿ.ಕೆ.ಜಗನ್ನಾಥ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವವರು.
ಅಭಿಮಾನಿ ಬಳಗದ ಮುಖ್ಯಸ್ಥ ಶಶಿಕುಮಾರ್ ಎಸ್ ಗೌಡ ಅಧ್ಯಕ್ಷತೆ ವಹಿಸುವವರು. ಜೆ.ಎಚ್.ಪಟೇಲ್ ಅಭಿಮಾನಿಗಳು ಮತ್ತು ಒಡನಾಡಿಗಳು ಸಮಸ್ತ ನಾಗರಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೇಳಿಕೆಯಲ್ಲಿ ಕೋರಿದ್ದಾರೆ.