ವಿಜಯ ಸಂಘರ್ಷ
ನಾಗಮಂಗಲ: ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವ ಮೂಲಕ ಮತ್ತೊಬ್ಬ ರಿಗೆ ಹಾಕಿಸಿಕೊಳ್ಳುವ ಅಂತೆ ಸ್ಪೂರ್ತಿ ನೀಡಿದಾಗ ಲಸಿಕೆ ಮಹತ್ವಯುವ 5 ತಿಳಿದಂತಾಗುತ್ತದೆ ಎಂದು ಆದಿಚುಂಚನಗಿರಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಯವಾಗಿದೆ .
ಅವರಿಂದು ನಾಗಮಂಗಲ ತಾಲ್ಲೂಕಿನ ಬಿ.ಜಿ ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಲಸಿಕ ಅಭಿಯಾನದ ದಿವ್ಯಸಾನಿಧ್ಯ ಕೊರೋನಾ ಅಲೇಯ ಸಂಕಷ್ಟಗಳು ಈಗಾಗಲೇ ಎದುರಿಸಿದ್ದು, ಮುಂದಿನ ಮೂರನೇ ರೂಪಾಂತರ ಕೊರೋನಾ ಎಲ್ಲರನ್ನೂ ಬೆಚ್ಚಿಬೀಳಿಸುವ ಭಯದ ವಾತಾವರಣ ಎಲ್ಲರಲ್ಲೂ ಆವರಿಸಿದ್ದು ಇದರಿಂದ ನಾವುಗಳು ದೂರಸರಿಯಲು ಈ ಮಹಾಮಾರಿ ರೋಗವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವ ನಿಟ್ಟಿನಲ್ಲಿ ಕೈಜೋಡಿಸ ಬೇಕೆಂದರು .
ಜಿಲ್ಲಾ ಆರೋಗ್ಯ ಅಧಿಕಾರಿ ಧನಂಜಯ ಮಾತನಾಡಿ, ಮನುಷ್ಯ ಮನುಷ್ಯತ್ವದ ಸಂಬಂಧಗಳ ಹಾಗೂ ಮಾನವೀಯತ ಮೌಲ್ಯ ಸಂಕೇತಗಳನ್ನು ದೂರ ಸರಿಯುವಂತೆ ಅಗಾಧ ಪರಿಣಾಮ ಇಂದು ನಮ್ಮೆದುರೇ ನೋಡಿರುವ ಕೊರೋನಾ ಮಹಾಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹ ಅಲೆ ನೋಡಿದ್ದು ಇಂತಹ ಸಂದರ್ಭಗಳಲ್ಲಿ ನಾವುಗಳು ನಮ್ಮ ಸಮಾಜದ ಹಿತ ಕಾಪಾಡಲು ಪ್ರತಿಯೊಬ್ಬರು ಲಸಿಕೆಯ ಪಡೆಯುವ ಮುಖಾಂತರ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗುವಂತೆ ತಿಳಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರು ನಾವು ಮತ್ತೆ ನಮ್ಮ ಕುಟುಂಬದವರ ಆರೋಗ್ಯವನ್ನು ಆರೋಗ್ಯದ ಹಿತದೃಷ್ಟಿಯಿಂದ ಲಸಿಕ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶ್ವನಿ ಅವರು ಮಾತನಾಡಿದರು .
ಇದೇ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಪ್ರಾಂಶುಪಾಲ ನರೇಂದ್ರ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟರ್ ಸುಬ್ಬರಾಯ್, ಪ್ರಾಂಶುಪಾಲ ಡಾ. ಶಿವರಾಂ. ಉಪವಿಭಾಗಧಿಕಾರಿ ಶಿವಾನಂದ ಮೂರ್ತಿ, ತಹಸೀಲ್ದಾರ್ ಕುಂಞಿ. ಅಹಮದ್ ಉಪಸ್ಥಿತರಿದ್ದರು
ದೇವಲಾಪುರ ಜಗದೀಶ್ ನಾಗಮಂಗಲ
ಸುದ್ದಿ ಮಾಹಿತಿಗಾಗಿ ಸಂಪರ್ಕಿಸಿ
+91 9743225795