ವಿಜಯ ಸಂಘರ್ಷ
"ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಫುಡ್ ಕಿಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದ ವಿರುದ್ಧ ಕುಟುಕಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ"
ಕೆ.ಆರ್. ಪೇಟೆ : ತಾಲೂಕು ಕಾಂಗ್ರೆಸ್ ಸಮಿತಿಯ ವತಿಯಿಂದ ಗ್ರಾಮಭಾರತಿ ಶಾಲಾ ಆವರಣದಲ್ಲಿ ಅಯೋಜಿಸಿದ್ದ ಕೊರೋನಾ ವಾರಿಯರ್ಸ್, ಪೌರ ಕಾರ್ಮಿಕರು ಹಾಗೂ ಕಡುಬಡವರಿಗೆ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಮಾಜಿ ಸ್ಪೀಕರ್ ಕೋತ್ತಮಾರನಹಳ್ಳಿ ಕೃಷ್ಣ ಹಾಗೂ ತಾಲೂಕಿನ ಕೋರೋನಾ ಸೋಂಕಿಗೆ ಮೃತಪಟ್ಟವರಿಗಾಗಿ ಗೌರವ ಸಲ್ಲಿಸಲಾಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿನ ಇಂತಹ ಲೂಟಿ ಸರ್ಕಾರ ಬೇಕಾ. ಹಿಂದಿನ ನಮ್ಮ ಸರ್ಕಾರದ ಉತ್ತಮ ಯೋಜನೆಗಳನ್ನು ಕೈ ಬಿಟ್ಟು ಯಡಿಯೂರಪ್ಪ ಸರ್ಕಾರ ಲೂಟಿ ಹೊಡಿಯುತ್ತಿದೆ . ಜಿಲ್ಲೆ ಹಾಲು ಹಗರಣದ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ರುತೆನೆ. ಸಿಎಂ ಯಡಿಯೂರಪ್ಪ ಇಂಥ ಸಂಕಷ್ಟ ಸಮಯದಲ್ಲಿ ನಮ್ಮ ಸರ್ಕಾರ ತಂದಿದ್ದ 7 ಕೆಜಿ ಅಕ್ಕಿ ಯೋಜನೆಗೆ ಕಡಿತಗೊಳಿಸಿ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ, 7 ಕೆಜಿ ಅಕ್ಕಿ ಕೊಟ್ಟಿದ್ದರೆ ಅವರ ಅಪ್ಪನ ಮನೆ ಗಂಟು ಹೋಗುತ್ತಿತ್ತು. ನಮ್ಮ ಅವಧಿಯಲ್ಲಿ ನಾನು ಕೂಡ ನಮ್ಮ ಅಪ್ಪನ ಮನೆಯಿಂದ ಕೊಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದರು. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರಕ್ಕೆ ಅಧಿಕಾರ ಬಂದರೆ ಪ್ರತಿ ಒಬ್ಬ ಬಡವನಿಗೂ ತಲಾ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಘೋಷಿಸಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ್ ಮಾತನಾಡಿ, ನಾಡಿನ ಜನ ಸಂಕಷ್ಟದಲ್ಲಿರುವಾಗ ನೆರವಿಗೆ ಮುಂದಾಗುವ ಕರ್ತವ್ಯವೇ ನಮ್ಮ ಪಕ್ಷದ ಪ್ರಮುಖ ಕರ್ತವ್ಯ. ತಮ್ಮ ಜೀವ ಹಂಗುತೊರೆದು ಎಲ್ಲಾ ಕೊರೋನಾ ವಾರಿಯರ್ಸ್ ಗಳಿಗೂ ಧನ್ಯವಾದಗಳು ತಿಳಿಸಿದರು.
ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ ಇಂತಹ ಸಂಕಷ್ಟ ಸಮಯದಲ್ಲಿ ನೆರೆ ರಾಜ್ಯಗಳ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಪೋಷಿಸಬೇಕಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ರವರ ಅಪೂರ್ವ ಆಸ್ಪತ್ರೆಯಿಂದ ರೋಗಿಗಳಿಗೆ ಅನುಕೂಲವಾಗಲಿ ಎಂದು ಮೆಡಿಕಲ್ ಕಿಟ್ ಗಳನ್ನು ತಾಲೂಕು ಆಸ್ಪತ್ರೆಗೆ ಹಸ್ತಾಂತ ರಿಸಲಾಯಿತು.
ಈ ಸಂದರ್ಭದಲ್ಲಿ,ಮಾಜಿ ಸಚಿವ ಚಲುವರಾಯಸ್ವಾಮಿ,ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಸಂಪಂಗಿ,ಮಾಜಿ ಶಾಸಕ ಬಿ. ಪ್ರಕಾಶ್ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾದ ಸುರೇಶ ಕಿಕ್ಕೇರಿ, ನಾಗೇಂದ್ರ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ವಕ್ತಾರ ರಾಮಕೃಷ್ಣೇಗೌಡ ಮಾದಾಪುರ, ಚೇತನ್, ಕುಮಾರ್ ಮತ್ತಿತರರಿದ್ದರು.
ವರದಿ: ಸಿ.ಆರ್.ಜಗದೀಶ್ ಕೆ.ಆರ್. ಪೇಟೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +91 9743225795