ವಿಜಯ ಸಂಘರ್ಷ
"ಕಟ್ಟೆಹಕ್ಕಲು,ಬೆಜ್ಜವಳ್ಳಿ ಭಾಗದ ರೈತರ ಗ್ರಾಹಕರ ಅಹವಾಲಿಗೆ ಪ್ರತಿದಿನ ಅಧಿಕಾರಿಗಳ ಸಮಯ ನಿಗದಿ"
ತೀರ್ಥಹಳ್ಳಿ: ಪಟ್ಟಣದ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ವಿದ್ಯುತ್ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಗ್ರಾಹಕರ ಸಮಸ್ಯೆಗೆ ಸಂಬಂಧಿಸಿದ ಅಹವಾಲುಗಳನ್ನು ಶಿವಮೊಗ್ಗ ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿರೇಂದ್ರ ಸಾರ್ವಜನಿ ಕರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೆಲ ಗ್ರಾಮೀಣ ಪ್ರದೇಶಗಳಲ್ಲಿ ರೈತರ, ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೆಸ್ಕಾಂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದೆ ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪಕ್ಕೆ, ಪ್ರತಿದಿನ ಮೆಸ್ಕಾಂ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಗಳು ಕಟ್ಟೆಹಕ್ಲು ಮತ್ತು ಬೆಜ್ಜವಳ್ಳಿ ಈ ಭಾಗದಲ್ಲಿ ಬೆಳಿಗ್ಗೆ 8-30 ರಿಂದ 10 ಗಂಟೆಯವರೆಗೆ ರೈತ ಹಾಗೂ ಸಾರ್ವಜನಿಕರ ಯಾವುದೇ ವಿದ್ಯುತ್ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಲಿದ್ದಾರೆ ಎಂದರು.
ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್
ವೈರ್ ಗಳು ಕೆಳ ಹಂತದಲ್ಲಿರುವ ರೈತರ ವಿದ್ಯುತ್ ಸಮಸ್ಯೆಗಳಿದ್ದರೆ
ಇಲಾಖೆ ಅಧಿಕಾರಿಗಳಿಗೆ ತಿಳಿಸಿ
ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಎಂಜಿನಿಯರ್ ಪ್ರಶಾಂತ್. ಗ್ರಾಮಾಂತರ ಎಂಜಿನಿಯರ್ ಗಳು , ಮೆಸ್ಕಾಂ ಸಿಬ್ಬಂದಿಗಳು ಇದ್ದರು.
ಸುದ್ದಿ ಮಾಹಿತಿಗಾಗಿ ಸಂಪರ್ಕಿಸಿ
+91 9743225795