ಅಸಂಘಟಿತ ಕಾರ್ಮಿಕರಿಗೆ ಸಚಿವರಿಂದ ಕಿಟ್ ವಿತರಣೆ

 


ವಿಜಯ ಸಂಘರ್ಷ

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕದಿರೇನಹಳ್ಳಿ ಯಲ್ಲಿ ಅಸಂಘಟಿತ ಕಾರ್ಮಿಕರ ಸೇವಾ ಕೇಂದ್ರ ಮತ್ತು ಕಾರ್ಮಿಕ ಸೇವಾ ಕೇಂದ್ರ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರು  ಪೇಂಟರ್ ಗಳಿಗೆ ದಿನಸಿ ಕಿಟ್ ಮತ್ತು ನಿರ್ಮಾಣ ಕಾಮಗಾರಿ ಸಲಕರಣೆಗಳನ್ನು ಕಂದಾಯ ಸಚಿವ ಆರ್. ಅಶೋಕ್ ವಿತರಿಸಿದರು.


ಈ ವೇಳೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಹಲವು ವಲಯಗಳು ತೊಂದರೆಗೆ ಸಿಲುಕಿದಂತೆ ಕಟ್ಟಡ ಕಾರ್ಮಿಕರು ಕೂಡಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೂ ಕೂಡಾ ನೆರವಿನ ಅಗತ್ಯವಿದ್ದೂ ಆ ನಿಟ್ಟಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿo ಸಂಘವು ಉತ್ತಮ ಕಾರ್ಯ ನಿರ್ವಹಿಸಿದೆ ಎಂದರು.

ಕಾರ್ಮಿಕರ ಸೇವಾ ಕೇಂದ್ರದ ಅಧ್ಯಕ್ಷ ಟಿ ವಿಜಯ್, ಬೆಂಗಳೂರು ದಕ್ಷಿಣ ಕಾರ್ಮಿಕ ಅಧಿಕಾರಿ ಕೆ.ಜಿ.ಮುಕುಂದ ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು