ವಿಜಯ ಸಂಘರ್ಷ
ನಾಗಮಂಗಲ: ನಾಡು ಕಂಡ ಅಪ್ರತಿಮ ವೀರ ಸಮಾನತೆಯ ಹರಿಕಾರನಾಗಿ ರಾಜ್ಯದ ನಾಡಕಟ್ಟುವ ದೊರೆಯಾಗಿ ನಮ್ಮಗಳಿಗೆ ಆದರ್ಶವಾಗಿರುವ ಕೆಂಪೇಗೌಡರನ್ನು ಸ್ಮರಿಸುವುದು ಅಗತ್ಯವೆಂದು ಶಾಸಕ ಸುರೇಶ್ ಗೌಡ ತಿಳಿಸಿದರು.
ಅವರಿಂದು ತಾಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ 512ನೇ ಜಯಂತೋತ್ಸವದ ಅಂಗವಾಗಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ತಹಸೀಲ್ದಾರ್ ಕುಂಞಿ. ಅಹಮದ್ ಮಾತನಾಡಿ, ಕೆಂಪೇಗೌಡರು ನಾವುಗಳು ಅವರ ಆದರ್ಶತೆ, ಅವರು ಹಾಕಿಕೊಟ್ಟ ಸಮಾನದ ತತ್ವ ಆಧಾರದ ಮೇಲೆ ಮುಂದಿನ ತಲೆಮಾರಿಗೂ ಅವರ ಯೋಜನೆಗಳ ಅನುಷ್ಠಾನಗಳು ಇಂದಿಗೂ ನಾವು ನೋಡುತ್ತಿದ್ದು ಅಂತಹ ಮಹಾನ್ ನಾಯಕರ ಸ್ಮರಣೆ ಯನ್ನು ಮೈಗೂಡಿಸಿಕೊಳ್ಳುವುದು ನಮ್ಮಗಳ ಕರ್ತವ್ಯ.
ನಾಡಪ್ರಭು ರವರ ಆಡಳಿತ ಕಾಲದಲ್ಲಿ ನಾಡಿನ ದೊರೆಯಾಗಿ ವಿವಿಧ ರಾಜ ಸಂತತಿಯ ಆಳ್ವಿಕೆಯ ಆಡಳಿತವನ್ನು ಮೈಗೂಡಿಸಿಕೊಂಡು ಆಡಳಿತ ನಡೆಸಿದವರಲ್ಲಿ ಕೆಂಪೇಗೌಡರು ಆಡಳಿತದಲ್ಲಿ ಸರ್ವ ಧರ್ಮಕ್ಕೂ ಸಮಪಾಲು ಎಂಬ ತತ್ವವನ್ನು ಅಳವಡಿಸಿಕೊಂಡು ಒಂದೇ ಜನಾಂಗಕ್ಕೆ ಸೀಮಿತವಾಗದೆ ಸಮಾನರನ್ನು ಕಾಣುತ್ತಿದ್ದರಲ್ಲಿ ನಾಡಪ್ರಭುಗಳ ಕಾರ್ಯವೈಖರಿ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪುರಸಭಾ ಸದಸ್ಯ ತಿಮ್ಮಪ್ಪ ರಾಮಸ್ವಾಮಿಗೌಡ, ಸಹಕಾರಿ ಮಂಡಲದ ನಿರ್ದೇಶಕ ರಾಜೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಮಂಜುನಾಥ್, ಮಂಡ್ಯದ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಶಿವಣ್ಣ ಕೆಂಪೇಗೌಡ ಅನೇಕರು ಉಪಸ್ಥಿತರಿದ್ದರು.
ವರದಿ :ದೇವಲಾಪುರ ಜಗದೀಶ್ ನಾಗಮಂಗಲ
ವಿಜಯ ಸಂಘರ್ಷ ಕ್ಕೆ ಸುದ್ದಿ
ನೀಡಲು ಕರೆ ಮಾಡಿ
+91 9743225795