ವಿಜಯ ಸಂಘರ್ಷ
ನಾಗಮಂಗಲ: ರಾಜ್ಯ ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲ ವಾಗಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಮಂತ್ರಿ ಮಂಡಲದ ಮಹೋದಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಮಾಜಿ ಸಂಸದ ಶಿವರಾಮೇಗೌಡರು ಆರೋಪಿಸಿದರು.
ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತ ನಡೆಸುವ ಸರ್ಕಾರ ಇಂದಿನ ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲಗೊಂಡಿದ್ದು ಆಡಳಿತ ನಡೆಸುವ ರಾಜ್ಯದ ಪ್ರತಿನಿಧಿಗಳು ಭ್ರಷ್ಟಾಚಾರವನ್ನು ತೊಡಗಿಸಿಕೊಂಡಿದ್ದು ರಾಜ್ಯದ ಜನತೆಯ ಹಿತವನ್ನು ಯಾವ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಾರೆ ಎಂಬುದನ್ನು ಮುಂದಿನ ಜನಾದೇಶದಲ್ಲಿ ಜನತಾ ನ್ಯಾಯಾಲಯದಲ್ಲಿ ತೀರ್ಪು ನೀಡಲಿದ್ದಾರೆ ಎಂದರು.
-ಮಂಡ್ಯದ ಸಕ್ಕರೆ ಕಾರ್ಖಾನೆ ಖಾಸಗೀಕರಣಕ್ಕೆ ಮಾಡಬಾರ ದೆಂಬುದು ಈಗಾಗಲೇ ಒತ್ತಾಯ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಂಡ್ಯ ಹಾಲು ಒಕ್ಕೂಟದ ಪ್ರಕರಣವನ್ನು ದೊಡ್ಡಮಟ್ಟದಲ್ಲಿ ತನಿಖೆ ಮಾಡಿ ಯಾರೇ ಆದರೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ .
ಇದೇ ಸಂದರ್ಭದಲ್ಲಿ ಲಾರಿ ಚೆನ್ನಪ್ಪ . ವಕೀಲರಾದ .ಟಿ.ಕೆ. ರಾಮೇಗೌಡ, ಕೊಪ್ಪ ತಮ್ಮಯ್ಯ,ಚೇತು ಮತ್ತಿತರಿದ್ದರು.
ವರದಿ : ದೇವಲಾಪುರ ಜಗದೀಶ್ ನಾಗಮಂಗಲ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795