ಶಿಕ್ಷಕರಿಗೆ "ಆಹಾರದ ಕಿಟ್" ವಿತರಿಸಿದ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್'

 

ವಿಜಯ ಸಂಘರ್ಷ /ಶಿವಮೊಗ್ಗ

ನಗರದ ನ್ಯೂ ಮಂಡ್ಲಿಯಲ್ಲಿನ  ಆರ್.ಆರ್ ಹೈಸ್ಕೂಲ್ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್' ವತಿಯಿಂದ  "ಆಹಾರದ ಕಿಟ್" ನೀಡಲಾಯಿತು

ಕಿಟ್" ವಿತರಿಸಿ ಮಾತನಾಡಿದ 'ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್' ಅಧ್ಯಕ್ಷ ಎನ್.ಎಮ್ ಸಿಗ್ಬತ್ ಉಲ್ಲಾ,  ಅನುದಾನರಹಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಅತೀವ ಸಂಕಷ್ಟದಲ್ಲಿದ್ದಾರೆ, ಲಾಕ್ಡೌನ್ ನಿಂದಾಗಿ ಶಿಕ್ಷಣದ ವ್ಯವಸ್ಥೆಗಳು ಬದಲು ಗೊಂಡಿವೆ, ಆನ್ ಲೈನ್ ಶಿಕ್ಷಣವೆಂದು ಮತ್ತಷ್ಟು ಶ್ರಮ ಅವರ ಮೇಲಿದೆ, ಹೀಗಿದ್ದರೂ ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳು ಪೋಷಕರನ್ನೆ ನಂಬಿವೆ, ಪೋಷಕರು ಕೋವಿಡ್ ಪರಿಸ್ಥಿತಿಯಲ್ಲಿ ದುಡಿಮೆ ನಿಲ್ಲಿಸಿದ್ದಾರೆ, ಈ ಎಲ್ಲಾ ಕಾರಣದಿಂದ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಕಾಲದಲ್ಲಿ ಸಂಬಳವೂ ಇಲ್ಲ, ಶಿಕ್ಷಣ ಸಚಿವರ ಹೇಳಿಕೆಯಂತೆ ಇನ್ನೂ ಬಿಡುಗಡೆ ಯಾಗದ ಪ್ಯಾಕೇಜ್ ನಿಂದಲೂ ವಂಚಿತವಾಗಿದ್ದಾರೆ.




ಹೀಗಾಗಿ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ ಒಂದಿಷ್ಟು ಶಾಲೆಗಳ ಶಿಕ್ಷಕರಿಗೆ "ಪುಡ್ ಕಿಟ್ " ನೀಡಲು ಮುಂದಾಗಿದೆ.  ಆರ್.ಆರ್ ಹೈಸ್ಕೂಲ್ ಶಿಕ್ಷಕರಿಗೆ ಕೊಡುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
     ಈ ಸಂದರ್ಭದಲ್ಲಿ ಪತ್ರಕರ್ತ ಗಾರಾ.ಶ್ರೀನಿವಾಸ್, 'ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್' ಕಾರ್ಯದರ್ಶಿ, ಹೆಚ್.ಎಸ್ ವಿಷ್ಣುಪ್ರಸಾದ್, ಮಲ್ನಾಡ್ ಪುಟ್ವೇರ್ ಮಾಲೀಕ ಇಮ್ರಾನ್ ಮಲ್ನಾಡ್, ಗೋಲ್ಡ್ ಸ್ಮಿತ್ ಅನಿಲ್ ಕುಮಾರ್, ಸಲೀಂ ಸಾಧಿಕ್, ರಖೀಬ್, ಮುಸಾವಿರ್ ಹಾಗೂ ಆರ್.ಆರ್ ಹೈಸ್ಕೂಲ್ ಶಿಕ್ಷಕರು  ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
ವಾಟ್ಸಪ್ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು