ಮುಜರಾಯಿ ದೇವಾಲಯ ಅನುದಾನ ಹೆಚ್ಚಳಕ್ಕೆ ಅರ್ಚಕರ ಒತ್ತಾಯ

 


ವಿಜಯ ಸಂಘರ್ಷ /ನಾಗಮಂಗಲ


ಪೂಜಾ ಸಾಮಗ್ರಿಗಳು ಬೆಲೆ ಏರಿಕೆಯಿಂದ ಮುಜರಾಯಿ ಇಲಾಖೆ ದೇವಾಲಯಗಳಿಗೆ ಸರ್ಕಾರ ನೀಡುವ ಸಹಾಯ ಧನ ಕಡಿಮೆಯಾಗಿದ್ದು, ಹೆಚ್ಚಿನ ಧನ ಸಹಾಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು  ಎಂದು ರಾಜ್ಯ ಅರ್ಚಕರ ಸಂಘದ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ತಿಳಿಸಿದರು.


 ಅವರಿಂದು ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡಿ, ಮುಜರಾಯಿ ಇಲಾಖೆಯಿಂದ ಅನುದಾನಗಳು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ಹಾಗೂ ದೇವಾಲಯದ ಪೂಜಾ ಸಾಮಗ್ರಿಗಳು ಬೆಲೆಯೇರಿಕೆಯಿಂದ ಸರ್ಕಾರವು ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು  ಒತ್ತಾಯಿಸಿದ್ದಾರೆ.


 ಸರ್ಕಾರ ನೀಡುವ ಅನುದಾನ ಹಾಗೂ ದೇವಸ್ಥಾನದ ನಿಧಿಗಳನ್ನು ಉಪಯೋಗಿಸಿಕೊಳ್ಳದೇ ದೇವಾಲಯಗಳ ಅಭಿವೃದ್ಧಿಗೆ ಉಪಯೋಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದು ಯಾವುದೇ ಕಾರ್ಯಕ್ಕೆ ಬಳಸಬಾರದೆಂದು  ಆಗ್ರಹಪಡಿಸಿದ್ದಾರೆ .


ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಕದಬಳ್ಳಿ ರಂಗಸ್ವಾಮಿ. ಸಂತೋಷ್. ನಾಗೇಶ್, ಜನಾರ್ಧನ್ ಹಾಜರಿದ್ದರು.


ದೇವಲಾಪುರ ಜಗದೀಶ್ ನಾಗಮಂಗಲ  


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 

ವಾಟ್ಸಪ್ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು