ಆನ್ ಲಾಕ್ ಮಧ್ಯಾಹ್ನದ ವರಗೆ ಸಮಯ ವಿಸ್ತರಣೆ

 ವಿಜಯ ಸಂಘರ್ಷ 



ಶಿವಮೊಗ್ಗ: ಜಿಲ್ಲೆಯಲ್ಲಿ ನಾಳೆಯಿಂದಲೇ ಅನ್ ಲಾಕ್ ಪ್ರಕ್ರಿಯೆ ಆರಂಭ ಗೊಂಡಿದೆ. 


ಬೆಳಿಗ್ಗೆ 6  ರಿಂದ 9 ಗಂಟೆಯ ವರೆಗೆ ತೆರೆಯಲು ಅವಕಾಶವಿದ್ದ ಅಂಗಡಿಗಳಿಗೆ ಹೆಚ್ಚಿನ ಸಮಯ ನೀಡಲು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಚಿವ ಈಶ್ವರಪ್ಪನವರ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಿದೆ.


ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಕಾಲಾವಕಾಶ ನೀಡಲು ಸಭೆ ಸೂಚಿಸಿದರೆ, ಉಳಿದ ಅಂಗಡಿಗಳಿಗೆ ಮಧ್ಯಾಹ್ನ ಎರಡರವರೆಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಮತ್ತು‌ ಮಾಸ್ಕ್ ಕಡ್ಡಾಯವಾಗಿದೆ.


ಎಪಿಎಂಸಿ ತರಕಾರಿ‌ ಮಾರುಕಟ್ಟೆ, ಗಾಂಧಿ ಬಜಾರ್ ದಿನಸಿ ಅಂಗಡಿ, ವ್ಯಾಪಾರಸ್ತರಿಗೆ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ತೆರೆಯಲು ಅವಕಾಶ ನೀಡಿದರೆ, ಸ್ಟೇಷನರಿ, ಪ್ಲಾಸ್ಟಿಕ್ ಹಾಗೂ ಹೋಲ್ ಸೇಲ್ ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಸಿಮೆಂಟ್, ಹಾರ್ಡ್ ವೇರ್ ಗಳಿಗೆ ಮದ್ಯಾಹ್ನ 2 ರ ವರೆಗೆ ಅವಕಾಶ ಕಲ್ಪಿಲಾಗಿದೆ.


ಸುದ್ದಿಗಾಗಿ ಸಂಪರ್ಕಿಸಿ +91 9743225795



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು