ಮಾಜಿ ಶಾಸಕರ ಜನ್ಮದಿನ ಕಾರ್ಯಕ್ರಮ: ಮರೆತೇ ವೆಂದರು ಮರೆಯಲಿ ನಿನ್ನ ಹೆಂಗ..!

ವಿಜಯ ಸಂಘರ್ಷ



ಭದ್ರಾವತಿ : ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಧಿಕಾರ ಇಲ್ಲ‌ ಅಂದ ತಕ್ಷಣ ಹಿಂಬಾಲಕರು ಹತ್ತಿರಕ್ಕೂ ಸುಳಿಯದ ಇಂದಿನ‌ ಕಾಲದಲ್ಲಿ ಮಾಜಿ ಶಾಸಕ ಅಪ್ಪಾಜಿ ಸಾವನ್ನಪ್ಪಿ 9 ತಿಂಗಳು ಕಳೆದಿದೆ. ಆದರೆ ಇಂದು ಅವರ ಜನ್ಮದಿನ.

ಇದಕ್ಕೆ ಸಾಕ್ಷಿಕರಿಸಿದ ನಗರಸಭಾ ನೂತನ ಸದಸ್ಯ ಬಸವರಾಜ್ ಬಿ.ಅನೆಕೊಪ್ಪ ನೇತೃತ್ವದಲ್ಲಿ ದಿವಂಗತ ಎಂ.ಜೆ ಅಪ್ಪಾಜಿಯವರ 68 ನೇ ಜನ್ಮದಿನದ ಅಂಗವಾಗಿ ಕಾಗದನಗರ ದಲ್ಲಿ ಹಮ್ಮಿಕೊಳ್ಳಲಾಗಿದ್ದ "ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮದ ಜನ್ಮ ದಿನಾಚರಣೆ ಆಚರಿಸಿದರು.

ಅಪ್ಪಾಜಿ ರವರ ಪತ್ನಿ ಶಾರದಾ ಅಪ್ಪಾಜಿ ಗಿಡ ನೆಟ್ಟು ಜನ್ಮ ದಿನಾಚರಣೆಗೆ ಚಾಲನೆ ನೀಡಿದರು. ಆಶಾ ಕಾರ್ಯ ಕರ್ತರು, ಪೌರ ಕಾರ್ಮಿಕರು ಹಾಗೂ ಸ್ಥಳೀಯ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು.





ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಜಯಶೀಲ ಸುರೇಶ್, ಮಾಜಿ ಸದಸ್ಯರಾದ ವಿಶಾಲಾಕ್ಷಿ, ಮೈಲಾರಪ್ಪ, ಎಸ್. ಚಂದ್ರಶೇಖರ್, ಅಪ್ಪಾಜಿ ಅಭಿಮಾನಿಗಳ ಬಳಗದ  ಆಪ್ತವಲಯದ ಡಿ.ಟಿ. ಶ್ರೀಧರ್, ಲೋಕೇಶ್ವರ ರಾವ್, ಉಜ್ಜಿನಿಪುರ ವೆಂಕಟೇಶ್, ಪೇಪರ್ ಟೌನ್ ಆಂಗ್ಲಶಾಲೆಯ ಪ್ರಾಂಶುಪಾಲ ಸತೀಶ್, ತಿಮ್ಮಪ್ಪ, ಚನ್ನಿಗಪ್ಪ, ರಮೇಶ್, ಡಾ. ಮಂಜುನಾಥ್, ಕಮಲಾಕರ್ ಮುಂತಾದವರಿದ್ದರು. ತಮಟೆ ಜಗದೀಶ್ ತಂಡದಿಂದ ಜಾನಪದ ಗಾಯನ ನಡೆಸಲಾಯಿತು.

ಸುದ್ದಿಗಾಗಿ ಸಂಪರ್ಕಿಸಿ : +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು